Header Ads
Breaking News

ಕಾರ್ಕಳ : ಡಿವೈಡರ್ ಕಾಮಗಾರಿ ಅಪೂರ್ಣಕ್ಕೆ ಸಾರ್ವಜನಿಕರ ಆಕ್ರೋಶ

ಕಾರ್ಕಳದ ಹೃದಯಭಾಗವಾದ ಬಂಗ್ಲೆಗುಡ್ಡೆ ಜಂಕ್ಷನ್‍ನಿಂದ-ಭವಾನಿ ಮಿಲ್ ಜಂಕ್ಷನ್‍ವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಅಭಿವೃದ್ಧಿಗೊಂಡಿದ್ದರೂ ರಸ್ತೆ ಮಧ್ಯದ ಡಿವೈಡರ್ ಕಾಮಗಾರಿ ಅರೆಬರೆಯಾಗಿಯಾಗಿದ್ದು, ಸ್ಥಗಿತಗೊಂಡಂತಿದೆ.

ಎಣ್ಣೆಹೊಳೆಯಿಂದ ಪುಲ್ಕೆರಿ ಜಂಕ್ಷನ್‍ವರೆಗಿನ ಒಟ್ಟು 13 ಕಿ.ಮಿ. ರಸ್ತೆ ಅಗಲೀಕರಣದೊಂದಿಗೆ ಡಾಮರೀಕರಣವಾಗಿದ್ದು ಬಂಗ್ಲೆಗುಡ್ಡೆಯಿಂದ ಭವಾನಿ ಮಿಲ್ ವರೆಗಿನ ರಸ್ತೆಯನ್ನು ಚತುಷ್ಪಥಗೊಳಿಸಲಾಗಿತ್ತು. 21.5 ಕೋಟಿ ರೂ. ಮೊತ್ತದ ಈ ಯೋಜನೆಯನ್ನು  ಕನ್ಸ್‍ಸ್ಟ್ರಕ್ಷನ್‍ನ ಇಕ್ಬಾಲ್ ಅಹಮ್ಮದ್ ಗುತ್ತಿಗೆ ಪಡೆದಿದ್ದರು. ಡಾಮರೀಕರಣ ಕಾಮಗಾರಿ ಪೂರ್ಣಗೊಳಿಸಿ ತಿಂಗಳು ಹಲವು ಕಳೆದರೂ ಡಿವೈಡರ್ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳು ಅರೆಬರೆಯಾಗಿದೆ. ಉಳಿದಂತೆ ಬೀದಿದೀಪ, ನಾಮಫಲಕ ಅಳವಡಿಕೆ ಕಾರ್ಯವೂ ಆಗಿಲ್ಲ.

ಜಯಂತಿ ನಗರದಲ್ಲಿರುವ ಸರ್ವಜ್ಞ ವೃತ್ತ ಬಳಿ ಡಿವೈಡರ್ ಕಾಮಗಾರಿ ಪೂರ್ಣಗೊಳ್ಳದೇ ಅಪಾಯಕಾರಿಯಾಗಿ ಕಂಡುಬರುತ್ತಿದೆ. ವಾಹನ ಚಾಲಕ, ದ್ವಿಚಕ್ರ ವಾಹನ ಸವಾರರಿಗೆ ಇದರಿಂದ ಸಾಕಷ್ಟು ತೊಂದರೆಯಾಗುತ್ತಿರುವುದಂತು ಸತ್ಯ. ಆದ್ದರಿಂದ ಶೀಘ್ರವಾಗಿ ಕಾಮಗಾರಿ ಮುಗಿಸುವಂತೆ ಸಾರ್ವಜನಿಕರು ಆಗ್ರಹಪಡಿಸುತ್ತಿದ್ದಾರೆ.

ಸರ್ವಜ್ಞ ವೃತ್ತದ ಸಮೀಪದಲ್ಲೇ ಲೋಕೋಪಯೋಗಿ ಇಲಾಖೆ ಕಚೇರಿಯಿದೆ. ಹೀಗಿದ್ದರೂ ಡಿವೈಡರ್ ಕಾಮಗಾರಿ ಪೂರ್ಣವಾಗದಿರುವುದು ಇಲಾಖಾಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ? ಅಥವಾ ಅಧಿಕಾರಿಗಳು ಕಂಡು ಕಾಣದಂತಿದ್ದಾರೆಯೇ ಎನ್ನುವುದು ಸಾರ್ವಜನಿಕರ ಪ್ರಶ್ನೆ.

Related posts

Leave a Reply

Your email address will not be published. Required fields are marked *