Header Ads
Header Ads
Breaking News

ಕಾರ್ಕಳ ತಾಲೂಕಿನಲ್ಲಿ ಹೆಚ್ಚಿದ ಕಾಳಿಂಗ ಸರ್ಪ: ಕಳೆದ 2 ತಿಂಗಳಲ್ಲಿ 4 ಕಾಳಿಂಗ ಹಾವು ಸೆರೆ

 ಕಾರ್ಕಳ ತಾಲೂಕಿನಲ್ಲಿ ಕಾಳಿಂಗ ಹಾವುಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಕಳೆದ ಎರಡು ತಿಂಗಳಿನಲ್ಲಿ ಕಾರ್ಕಳ ನಗರ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಕಾಳಿಂಗ ಹಾವು ಕಾಣಿಸುತ್ತಿದ್ದು ಜನತೆ ಭಯ ಬೀತರಾಗಿದ್ದಾರೆ. ಒಂದೇ ತಿಂಗಳಿನಲ್ಲಿ ನಾಲ್ಕು ಕಡೆಗಳಲ್ಲಿ ಕಾಳಿಂಗ ಹಾವು ಪ್ರತ್ಯಕ್ಷ ವಾಗಿದೆ.ಈಗಾಗಲೇ ಕಾರ್ಕಳ ಕಸಬಾ ಗ್ರಾಮದ ಪುಲ್ಕೇರಿ ಬೈಪಾಸ್, ಬೈಲೂರು, ಗಣಿತ್ ನಗರ, ತೆಳ್ಳಾರು ಪ್ರದೇಶಗಳಲ್ಲಿ ಹಾವುಗಳು ಸೆರೆ ಸಿಕ್ಕಿವೆ.

ಗಂಭೀರ ಗಾಯಗೊಂಡ ನಾಗರ ಹಾವೊಂದಕ್ಕೆ ಉರಗ ತಜ್ಞ ಅನಿಲ್ ಪ್ರಭು ಅವರು ತಮ್ಮ ಮನೆಯಲ್ಲಿ ಹಾರೈಕೆ ಮಾಡುತ್ತಿದ್ದರು. ವಿಪರೀತ ಗಾಯಗೊಂಡ ನಾಗರ ಹಾವು ಯಾವುದೇ ಅಹಾರ ಸ್ವೀಕರಿಸದೇ ಇದ್ದಾಗ ಗಾಯಗೊಂಡ ಹಾವಿಗೆ ಕೈಯಲ್ಲಿ ಹಿಡಿದು ಮೊಟ್ಟೆಯನ್ನು ಸೀರಿಂಜ್ ಮೂಲಕ ನೀಡುತ್ತಿದ್ದ ವೇಳೆ ಅಕಸ್ಮಾತ್ ಆಗಿ ಹಾವು ಕೈಗೆ ಕಚ್ಚಿತ್ತು. ಕೂಡಲೇ ಎಚ್ಚೆತ್ತ ಸ್ಥಳೀಯರು ಅವರನ್ನು ಸ್ಥಳೀಯ ಅಸ್ಪತ್ರೆಗೆ ದಾಖಲಿಸಿದ್ದರು. ಆದರೆಹಾವು ಕೈ ಬೆರಳಿಗೆ ಕಚ್ಚಿದ ಪರಿಣಾಮ ವೈದ್ಯರು ಬೆರಳನ್ನು ಕತ್ತರಿಸಬೇಕು ಇಲ್ಲದಿದ್ದಲ್ಲಿ ಪ್ರಾಣ ಉಳಿಯದು ಎಂದು ತಿಳಿಸಿದಾಗ ಕೊನೆಗೆ ಕೈಯ ಒಂದು ಬೆರಳನ್ನೇ ಕತ್ತಿರಿಸಲಾಯಿತು. ಬೆರಳನ್ನು ಕಳೆದು ಕೊಂಡರೂ ಹಾವನ್ನು ಹಿಡಿಯುವ ಕಾಯಕ ಇವರು ಮುಂದುವರೆಸಿದ್ದಾರೆ.

ತಾಲೂಕಿನಲ್ಲಿ ಯಾವುದೇ ವಿಷಕಾರಿ ಹಾವುಗಳು, ಕಂಡು ಬಂದಲ್ಲಿ ಮೊದಲು ಆಪತ್ಭಾಂಧವ ಉರಗ ತಜ್ಞ ಅನಿಲ್ ಪ್ರಭುಗೆ ಸ್ಥಳೀಯರು ಕರೆ ಮಾಡುತ್ತಾರೆ. ಕರೆ ಮಾಡಿದ ಕ್ಷಣಮಾತ್ರದಲ್ಲಿ ಸ್ಥಳಕ್ಕೆ ಅನಿಲ್ ಪ್ರಭು ಹಾಜಾರಾಗುತ್ತಾರೆ. ತನ್ನ ಪ್ರಾಣ ಲೆಕ್ಕಿಸದೇ ಯಾವುದೇ ಫ ಅಪೇಕ್ಷೆ ಇಲ್ಲದೆ ಈ ಹಾವುಗಳನ್ನು ಹಿಡಿಯುವಲ್ಲಿ ಅವರ ಸೇವೆ ಅನನ್ಯವಾಗಿದೆ. ಸ್ವತಃ ತಮ್ಮ ಕೈಯಿಂದಲೇ ಅವರೇ ವಾಹನಕ್ಕೆ ಇಂಧನ ತುಂಬಿಸಿ ಹಾವನ್ನು ಬಂಧಿಸಿದ ಬಳಿಕ ಕುದುರೆಮುಖ ಅಭಯಾರಣ್ಯ ಕ್ಕೆ ಬಿಡಲಾಗುತ್ತದೆ.ಅರಣ್ಯ ಇಲಾಖೆ ಅಧಿಕಾರಗಳು ಇವರ ಸೇವೆ ಹಾಗೂ ಪ್ರತಿಭೆ ಯನ್ನು ಗುರುತಿಸದೇ ಇರುವುದು ನಮ್ಮೆಲ್ಲಾರ ದೌಬಾಗ್ಯವಾಗಿದೆ.ಇನ್ನಾದರೂ ಇಲಾಖೆ ಇಂತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದಲ್ಲಿ ಮುಂದೆ ಇವರ ಸೇವೆ ನಿರಂತರ ಸಿಗಬಹುದು ಎಂಬು ಸರ್ವಾಜನಿಕರ ಅಶಯವಾಗಿದೆ.

Related posts

Leave a Reply