Header Ads
Header Ads
Breaking News

ಕಾರ್ಕಳ ತಾಲೂಕಿನಲ್ಲಿ 10 ಡೆಂಗ್ಯು ಪ್ರಕರಣ ಪತ್ತೆ : ಇನ್ನೂ ಎಚ್ಚೆತ್ತುಕೊಳ್ಳದ ಪುರಸಭೆ

ಕಾರ್ಕಳ ಪುರಸಭೆ ವ್ಯಾಪ್ತಿಯ ಮುಖ್ಯ ಮಾರುಕಟ್ಟೆಯಾದ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣ ವಾಹನ ನಿಲುಗಡೆ ಪ್ರದೇಶದಲ್ಲಿ ಕೊಳಚೆ ನೀರು ಸಂಗ್ರಹವಾಗಿ ದುರ್ವಾಸನೆ ಹಬ್ಬಲು ಪ್ರಾರಂಭವಾಗಿದೆ. ಈಗಾಗಲೇ ಕಾರ್ಕಳ ತಾಲೂಕಿನಲ್ಲಿ 10 ಡೆಂಗ್ಯು ಪ್ರಕರಣ ದಾಖಲಾಗಿದೆ. ಅದಲ್ಲದೆ 15 ಮಂದಿಗೆ ರೋಗದ ಲಕ್ಷಣ ಕಂಡುಬಂದಿದೆ. ಇಷ್ಟಾದರೂ ಪುರಸಭೆ ಕಣ್ಣುಮುಚ್ಚಿ ಕುಳಿತಿದೆ. ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕು ಆರೋಗ್ಯ ಕೇಂದ್ರ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡರೂ ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಕಾರ್ಕಳದ ಹಲವು ಕಡೆ ಕೊಳಚೆ ನೀರು ಶೇಖರಣೆಯಾಗಿ ಸೊಳ್ಳೆ ಉತ್ಪತ್ತಿಯಾಗಿ ರೋಗಗಳು ಹರಡಿದರೂ ಕಾರ್ಕಳ ಪುರಸಭೆ ಈ ಬಗ್ಗೆ ಗಮನ ಹರಿಸುತ್ತಿಲ್ಲ ಅನ್ನೋದೇ ವಿಷಾಧನೀಯ.

Related posts

Leave a Reply

Your email address will not be published. Required fields are marked *