Header Ads
Header Ads
Breaking News

ಕಾರ್ಕಳ ತಾಲೂಕು ಬಿಲ್ಲವ ಸಮ್ಮೇಳನ

ಕಾರ್ಕಳ: ರಾಜಕೀಯದಲ್ಲಿ ಮಾತ್ರವಲ್ಲ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಜೊತೆಗೆ ಆಡಳಿತಾತ್ಮಕ ಕ್ಷೇತ್ರದಲ್ಲೂ ಪ್ರಾತಿನಿದ್ಯ ಸಿಕ್ಕಾಗ ಮಾತ್ರ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ. ಸಮ್ಮೇಳನದ ಮೂಲಕ ಸಮುದಾಯದ ಜನತೆ ಹೊಸ ಸಂದೇಶ ನೀಡುವ ಅಗತ್ಯ ಇದೆ ಎಂದು ಶಾಸಕ ಹಾಗೂ ವಿಧಾನ ಸಭಾ ಪ್ರತಿಪಕ್ಷ ಮುಖ್ಯ ಸಚೇತಕ ವಿ.ಸುನೀಲ್‌ಕುಮಾರ್ ಹೇಳಿದರು.


ಪೆರ್ವಾಜೆ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ಕಾರ್ಕಳ ವತಿಯಿಂದ ಆಯೋಜಿಸಲಾಗಿದ್ದ ಕಾರ್ಕಳ ತಾಲೂಕು ಬಿಲ್ಲವ ಸಮ್ಮೇಳನ, ವಾಣಿಜ್ಯ ಸಂಕೀರ್ಣ ಮತ್ತು ನೂತನ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ನೂತನ ಸಬಾಂಗಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ನಾಲ್ಕರಿಂದ ಐದನೇ ಸ್ಥಾನದಲ್ಲಿರುವ ಈ ಬಿಲ್ಲವ ಸಮುದಾಯ ಸಂಘಟಿತರಾಗಿ, ನಿರ್ದಿಷ್ಟ ಉದ್ದೇಶವನ್ನು ಸರಕಾರದ ಮುಂದಿಡುವ ಮೂಲಕ ಸಮುದಾಯದ ಅಭಿವೃದ್ದಿಗೆ ಜತೆಯಾಗಿ ಶ್ರಮಿಸಬೇಕು. ಎಂದರು. ಸಂಘಟನೆಯಿಂದ ನಮ್ಮ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂದು ಹೇಳಿದರು.

ಹೊಸ್ಮಾರು ಶ್ರೀ ಕ್ಷೇತ್ರ ಬಲ್ಯೊಟ್ಟುನ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಧರ್ಮದ ಹಾದಿಯಲ್ಲಿ ನಡೆದು, ಸತ್ಯ, ಸದ್ವಿಚಾರ, ಸತ್‌ಚಿಂತನೆಯಿಂದ ಬಾಳಿದರೆ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಲು ಸಾಧ್ಯ. ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಪ್ರಯತ್ನಿಸಿದಾಗ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ.
ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಾ.ಡಿ.ಆರ್.ರಾಜು ಅಧ್ಯಕ್ಷತೆ ವಹಿಸಿದ್ದರು. ಮಹಾರಾಷ್ಟ್ರ ಲೋನಾವಾಲ ಪುರಸಭೆ ಉಪಾಧ್ಯಕ್ಷ ಹಾಗೂ ಉದ್ಯಮಿ ಶ್ರೀಧರ ಎಸ್. ಪೂಜಾರಿ ಬೋಜನ ಶಾಲೆ ಉದ್ಘಾಟಿಸಿದರು.ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು ರಶ್ಮಿ ಚಾರಿಟೇಬಲ್ ಟ್ರಸ್ಟ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಬೆಂಗಳೂರು ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ವೇದ ಕುಮಾರ್, ರಶ್ಮಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸಾವಿತ್ರಿ ಡಿ.ಆರ್.ರಾಜು, ಯಕ್ಷಗಾನ ಕಲಾವಿದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾರಾಮ್ ಕಟೀಲ್, ವಿವಿಧ ಸಮಿತಿ ಹಾಗೂ ಸಂಘದ ಪದಾಧಿಕಾರಿಗಾದ ಪ್ರಭಾಕರ ಬಂಗೇರ, ಚಂದ್ರಹಾಸ ಸುವರ್ಣ, ಪ್ರದೀಪ್ ಕೋಟ್ಯಾನ್, ಸುಭಿತ್ ಕುಮಾರ್ ಎನ್, ಪ್ರವೀಣ್ ಸುವರ್ಣ, ನವೀನ್ ಸುವರ್ಣ, ಸಂದೇಶ್ ಕೋಟ್ಯಾನ್, ನಾಗಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply