Header Ads
Header Ads
Header Ads
Breaking News

ಕಾರ್ಕಳ ತಾಲೂಕು ಹದಿನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಸಂಯುಕ್ತ ಪ್ರೌಡಶಾಲೆಯಲ್ಲಿ ನಡೆಯಿತು.

 
ಈ ಸಂದರ್ಭದಲ್ಲಿ ಕಾರ್ಕಳ ಅನಂತಶಯನದಿಂದ ತೆರೆದ ವಾಹನದಲ್ಲಿ ಕನ್ನಡಾಂಭೆಯ ಭಾವಚಿತ್ರದ ಜೊತೆಗೆ ಸಮ್ಮೇಳನದ ಅಧ್ಯಕ್ಷರನ್ನು ಹಾಗೂ ಅಥಿತಿಗಳನ್ನು ಪೂರ್ಣಕುಂಭದೊಂದಿಗೆ ಶಾಲಾ ವಿದ್ಯಾರ್ಥಿಗಳು ಕರೆತಂದರು. ಕಾರ್ಕಳದ ಶಾಸಕರು ಸುನೀಲ್ ಕುಮಾರ್‌ರವರು ದೀಪ ಬೆಳಗಿಸಿ ಸಮ್ಮೇಳನವನ್ನು ಉದ್ಘಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಸುರೇಂದ್ರ ಅಡಿಗ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಹೊಸದಾಗಿ ನಾಲ್ಕು ತಾಲೂಕುಗಳು ರಚನೆಯಾಗುತ್ತದೆ. ಆಗ 4 ಕಡೆ ಸಾಹಿತ್ಯ ಸಂಘಗಳು ರಚನೆಯಾಗಿ 600  ಮಂದಿ ಕನ್ನಡ ಸಂಘದ ಸದಸ್ಯರು ಉದಯವಾಗುತ್ತಾರೆ ಎಂದು ಹೇಳಿದರು.

ಉದ್ಘಾಟನಾ ಭಾಷಣ ಮಾಡಿದ ಶಾಸಕ ಸುನೀಲ್ ಕುಮಾರ್, ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಗುಣಗಾನ ಆಗಿರಬಹುದೆಂದು ಹೇಳಿದರು. ಕನ್ನಡದ ಹಿರಿಮೆ ಸಿರಿವಂತಿಕೆ ಉಳಿಸಬೇಕು ಯುವಕರಿಗೆ ಕನ್ನಡದ ಬಗ್ಗೆ ಆಸಕ್ತಿ ಹುಟ್ಟಿಸಬೇಕೆಂದರು.

ಕಾರ್ಯಕ್ರಮದಲ್ಲಿ ನಾಡೋಜಾ ಡಾ| ಮಹೇಶ್ ಜ್ಯೋಶಿ, ಹರಿಕೃಷ್ಣ ಪುನರೂರು ಸಮ್ಮೇಳನದ ಅಧ್ಯಕ್ಷರಾದ ಜ್ಯೋತಿ ಗುರುಪ್ರಸಾದ್ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ: ಕೆ.ಎಂ. ಖಲೀಲ್ ಕಾರ್ಕಳ

 

Related posts

Leave a Reply