Header Ads
Header Ads
Header Ads
Breaking News

ಕಾರ್ಕಳ ತಾ.ಪಂ.ಸಾಮಾನ್ಯ ಸಭೆ ಪಡಿತರ ಚೀಟಿ ಅಸಮರ್ಪಕ ವಿತರಣೆ ಸಭೆಯಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ

ಎರಡು ವಾರದಲ್ಲಿ ಹೊಸ ಪಡಿತರ ಚೀಟಿ ಅಂಚೆ ಮೂಲಕ ಮನೆಗೆ ತಲುಪುತ್ತದೆ ಎಂದು ಉಸ್ತುವಾರಿ ಸಚಿವರು ಹೇಳುತ್ತಿದ್ದಾರೆ. ಅದರ ಪ್ರಯೋಜನ ಸಿಗುತ್ತಿರುವುದು ಉಡುಪಿ ಕ್ಷೇತ್ರದ ಜನತೆಗೆ. ಅದೇ ಪ್ರಯೋಜನ ಕಾರ್ಕಳದ ಜನತೆಗೆ ಯಾಕಿಲ್ಲ ಎಂದು ಮರ್ಣೆ ಗ್ರಾ.ಪಂ.ಸದಸ್ಯ ಹರೀಶ್ ನಾಯಕ್ ಹಾಗೂ ತಾ.ಪಂ.ಸದಸ್ಯೆ ಸೌಭಾಗ್ಯ ಪ್ರಶ್ನಿಸಿದ್ದಾರೆ.

ಅವರು ತಾಲೂಕು ಪಂಚಾಯತ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ರೇಶನ್ ಕಾರ್ಡು ಇಲ್ಲದೆ ದಿನದೂಡಬೇಕಾದ ಪರಿಸ್ಥಿತಿ ಜನತೆಗೆ ಬಂದಿದೆ. ರೇಷನ್ ಕಾರ್ಡ್ ಇಲ್ಲದೆ ಮಕ್ಕಳಿಗೆ ಶಾಲೆಯಲ್ಲಿ ದಾಖಲಾತಿಗೆ ಸಮಸ್ಯೆ ಹಾಗೂ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತೆರಳಿದ ಸಂದರ್ಭ ಸಮಸ್ಯೆಯಾಗುತ್ತಿದೆ. ತಿದ್ದುಪಡಿಗೆ ಅವಕಾಶವಿಲ್ಲ. ಕಳೆದು ಹೋದ ರೇಷನ್ ಕಾರ್ಡು ನವೀಕರಣಗೊಳಿಸಲು ಅವಕಾಶವಿಲ್ಲ. ಒಟ್ಟಾರೆಯಾಗಿ ರೇಷನ್ ಕಾರ್ಡು ಸಿಗದೆ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸಭೆಯಲ್ಲಿ ನಿರ್ಣಯ ಮಾಡಿ ಪ್ರಸ್ತಾವನೆಯನ್ನು ಜಿಲ್ಲಾಕಾರಿಗೆ ಕಳುಹಿಸುವಂತೆ ಒತ್ತಾಯಿಸಿದ್ದಾರೆ.

ಈದು ಗ್ರಾ.ಪಂ.ಸದಸ್ಯೆ ಮಂಜುಳಾ ಮಾತನಾಡಿ, ಈದು ಗ್ರಾಮದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಪಶು ವೈದ್ಯರ ಸಮಸ್ಯೆಯಿದೆ. ಗ್ರಾಮೀಣ ಪ್ರದೇಶವಾದ್ದರಿಂದ ತುರ್ತು ಸಂದರ್ಭ ಪಶು ವೈದ್ಯರು ಸಿಗದಿರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ.

 

ತಾ.ಪಂ.ಅಧ್ಯಕ್ಷೆ ಮಾಲಿನಿ ಶೆಟ್ಟಿ ಉತ್ತರಿಸಿ, ಸರಕಾರವು ಹುದ್ದೆಗಳ ನೇಮಕಾತಿ ಮಾಡಿಲ್ಲದ ಕಾರಣ ಪಶು ವೈದ್ಯರ ಕೊರತೆಯಾಗಿದೆ. ಅಲ್ಲದೆ ಎಲ್ಲಾ ಇಲಾಖೆಗಳಲ್ಲೂ ಸಿಬ್ಬಂದಿಗಳ ಕೊರತೆಯಿದೆ ಎಂದರು.

ಬೋಳದಲ್ಲಿ ಕೃಷಿಕರ ದಾಸ್ತಾನು ಹಟ್ಟಿಗೆ ಬೆಂಕಿ ಬಿದ್ದಿದ್ದು, ಸೂಕ್ತ ಪರಿಹಾರ ಒದಗಿಸಿಕೊಡಿ ಎಂದು ಪುಷ್ಪಾ ಸತೀಶ್ ಒತ್ತಾಯಿಸಿ, ನಂದಳಿಕೆ ದ್ವಾರದ ಬಳಿ ಗ್ರಾ.ಪಂ.ಅನುಮತಿ ಪಡೆಯದೆ ಬಿ‌ಎಸ್‌ಎನ್‌ಎಲ್‌ನವರು ರಸ್ತೆ ಅಗೆದಿರುವ ಬಗ್ಗೆ ಆರೋಪಿಸಿದರು.

ಚಾರ ಗ್ರಾ.ಪಂ.ಅಧ್ಯಕ್ಷ ಸಂದೀಪ್, ನಂದಳಿಕೆ ಗ್ರಾ.ಪಂ. ಅಧ್ಯಕ್ಷೆ ಜಯಂತಿ, ಬೈಲೂರು ಗ್ರಾ.ಪಂ.ಅಧ್ಯಕ್ಷೆ ಶ್ವೇತಾ ಶೆಟ್ಟಿ, ದುರ್ಗ ಗ್ರಾ.ಪಂ.ಅಧ್ಯಕ್ಷೆ ದೇವಕಿ ಮೂಲ್ಯ, ಮುಂಡ್ಕೂರು ಗ್ರಾ.ಪಂ.ಅಧ್ಯಕ್ಷೆ ಶೋಭ ಶೆಟ್ಟಿ, ಕಾಂತಾವರ ಜಯ ಪೂಜಾರಿ ನಾಮನಿರ್ದೇಶಕ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಉಪಾಧ್ಯಕ್ಷ ಗೋಪಾಲ ಮೂಲ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕಾರ್ಯನಿರ್ವಹಣಾಕಾರಿ ಕೇಶವ ಶೆಟ್ಟಿಗಾರ್ ಉಪಸ್ಥಿತರಿದ್ದರು.

Related posts

Leave a Reply