Header Ads
Header Ads
Breaking News

ಕಾರ್ಕಳ ತುಳುನಾಡ ಗ್ರಾಮೀಣ ಅಹಾರೋತ್ಸವ ಸಂತುಲಿನ ಆಹಾರ ಜಾಗೃತಿ ಕಾರ್ಯಕ್ರಮ ೮೦ಕ್ಕೂ ಹೆಚ್ಚು ಬಗೆಯ ತಿಂಡಿ ತಿನಿಸುಗಳ ಬೊಂಬಾಟ್ ಬೋಜನ

 
ಕಾರ್ಕಳ ತುಳುನಾಡ ಗ್ರಾಮೀಣ ಅವರೋತ್ಸಾವ ೨೦೧೭ ಮತ್ತು ಸಂತುಲಿನ ಆಹಾರ ಜಾಗೃತಿ ಕಾರ್ಯಕ್ರಮ ೨೪ನೇ ವರ್ಷದ ಸಂಭ್ರಮದ ಸಾಂಸ್ಕೃತಿ ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ ಸುಮಾರು ೮೦ಕ್ಕೂ ಅಧಿಕ ಬಗೆಯ ತಿಂಡಿ ತಿನಿಸುಗಳ ಬೊಂಬಾಟ್ ಬೋಜನ ಕೋಟದ ಕಾರ್ಯಕ್ರಮ ಜರುಗಿತು.


ಕಾರ್ಯಕ್ರಮದ ಉದ್ಘಾಟನೆಯು ಚಿದಾನಂದ ಕಾಮತ್ ಕಾಸರಗೋಡು ವೇದಿಕೆಯಲ್ಲಿ ಶ್ರೀ ಮುನಿಯಾಲು ಉದಯ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತಾನಾಡಿದ ಅವರು ನಮ್ಮ ಸಂಸ್ಕೃತಿ ಸಂಸಾರದಿಂದ ಬಹಳ ದೂರ ಹೋಗುತ್ತಿದ್ದೇವೆ. ಇಂತಹ ಕಾರ್ಯಕ್ರಮಗಳಿಂದ ನಮ್ಮ ಪೂರ್ವಜರು ಹಾಕಿ ಕೊಟ್ಟ ಆಹಾರ ಸಂಸ್ಕೃತಿಗೆ ಮರಳಿತ್ತಿದ್ದೇವೆ ಎಂದರು ನಂತರ ಮಾತಾನಾಡಿದ ಹಿರಿಯ ಸಾಹಿತಿ ಜಯಪ್ರಕಾಶ್ ಮಾವಿನಕುಳಿ ನಾವು ಹೇಗೆ ಮಾತಾನಾಡಬೇಕು ಎಂದು ಕಲಿತರೆ ಆತ ತನ್ನ ಜೀವನದಲ್ಲಿ ಜಯಿಸುತ್ತಾನೆ ಅದೇ ರೀತಿ ನಾವು ನಮ್ಮ ಆಹಾರವನ್ನು ಹೇಗೆ ಸೇವಿಸಬೇಕು ಹೇಗೆ ಉಪಯೋಗಿಸಬೇಕು ಎಂದು ತಿಳಿದರೆ ಅವನಿಗೆ ರೋಗಗಳಿಂದ ಬದುಕಬಹುದು ಎಂದರು ನಂತರ ಈಗಿನ ಜಂಗ್ ಪುಡ್‌ಗಳನ್ನು ನಿಷೇದಿಸಬೇಕೆಂದು ಪುರಸಭೆ ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು ಪ್ರಸ್ತಾವಿಕ ಭಾಷಣ ಮಾಡಿದ ಸಾಣೂರು ಸತೀಶ್ ಸಾಲಿಯಾನ್ ಪ್ರಾಸ್ತವಿಕ ಭಾಷಣ ಮಾಡಿದರು. ಪುರಸಭೆ ಅಧ್ಯಕ್ಷೆ ಅನಿತಾ ಆರ್.

ಅಂಚನ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸುಮಾರು ೧೦೦ ಬಗೆಯ ತುಳುನಾಡ ಬಗೆ ಬಗೆಯ ಆಹಾರ ಪಾದಾರ್ಥ ಪ್ರದರ್ಶನ ಮಾರ್ಪಡಿಸಲಾಗಿತ್ತು ನಂತರ ಕನ್ನಡ ಜಾಗೃತ ಬಳಗದವರಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮವು ಜರುಗಿತು.
ವೇದಿಕೆಯಲ್ಲಿ ಅನಿತಾ ಆರ್. ಅಂಚನ್ ಸಾಣೂರು ಸತೀಶ್ ಸಾಲಿಯಾನ್ ಜಾನ್ ಡಿ ಸಿಲ್ವ ಉಪಸ್ಥಿತರಿದ್ದರು.
ವರದಿ: ಕೆ. ಎಂ ಕಲೀಲ್

Related posts

Leave a Reply