Header Ads
Breaking News

ಕಾರ್ಕಳ ನಗರದ ಒಳಚರಂಡಿ ಅವೈಜ್ಞಾನಿಕ ಕಾಮಗಾರಿ : ನಗರ ನಿವಾಸಿಗಳು ಬೇಸತ್ತು ತೀವ್ರ ಆಕ್ರೋಶ

ಕಾರ್ಕಳ ನಗರದ ಒಳಚರಂಡಿ ಕಾಮಗಾರಿ ಪೂರ್ಣಗೊಂಡು ಹಲವು ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದ ನಗರ ನಿವಾಸಿಗಳು ಇದೀಗ ಗುತ್ತಿಗೆದಾರರ ಅಸರ್ಮಪಕ ಹಾಗೂ ಅವೈಜ್ಞಾನಿಕ ಕಾಮಗಾರಿಗಳಿಂದ ಬೇಸತ್ತು ತೀವ್ರತರದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯುಜೆಡಿ ಯೋಜನೆಗೆ ರಾಜ್ಯ ಸರಕಾರದಿಂದ 13 ಕೋಟಿ ಮಂಜೂರಾಗಿದ್ದು ಮಾರ್ಚ್ ಐದರಂದು ಶಾಸಕ ಸುನೀಲ್ ಕುಮಾರ್ ಶಿಲಾನ್ಯಾಸಗೈದರು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಉಸ್ತುವಾರಿ ಯಲ್ಲಿ ಕಾಮಗಾರಿ ನಡೆಯುತ್ತಿದ್ದು ಶುಭಲಕ್ಷ್ಮಿ ಕನ್ಸ್ಟ್ರಕ್ಷನ್ ನಂದಕುಮಾರ್ ಗುತ್ತಿಗೆ ಪಡೆದಿದ್ದರು. ಲೊಕ್ಡೌನ್ ಸಡಿಲಿಕೆ ಬಳಿಕ ಕಾಮಗಾರಿಗೆ ಮತ್ತು ಪ್ರಾರಂಭವಾಗಿದ್ದರೂ ಕಾಮಗಾರಿಕೆ ಸರ್ಮಪಕವಾಗಿ ಸಾಗುತ್ತಿಲ್ಲ. ಕಾಮಗಾರಿಗೆ ಪ್ರಾರಂಭವಾದ ದಿನದಿಂದ ಒಂದು ರೀತಿಯಲ್ಲಿ ಸ್ಥಳೀಯರಿಂದ ಪ್ರತಿರೋಧ ವ್ಯಕ್ತವಾಗುತ್ತಿದೆ.

ಮಳೆಗಾಲ ಪ್ರಾರಂಭವಾಗಿದ್ದು ಅದಕ್ಕೂ ಮುನ್ನ ಒಳಚರಂಡಿ ಕಾಮಗಾರಿಕೆ ಪೂರ್ಣವಾಗದೇ ಇದ್ದಲ್ಲಿ ನಗರದ ಎಲ್ಲೆಡೆ ಕಲ್ಮಶ ನೀರು ನಿಂತು ಸೊಳ್ಳೆ ಉತ್ಪತ್ತಿ ಆಗುವ ಸಂಭವವಿದೆ. ಅಲ್ಲದೆ ಮಲಿನ ನೀರು ಕುಡಿಯುವ ನೀರಿನ ಬಾವಿಗೆ ಹರಿಯುವ ಸಾಧ್ಯತೆ ಇದೆ. ಬಹುನಿರೀಕ್ಷಿತ ಒಳಚರಂಡಿ ಕಾಮಗಾರಿ ಸಮರ್ಪಕವಾಗಿ ವೇಗವಾಗಿ ನಡೆಯಲಿ. ಎಂದು ಕಾರ್ಕಳದ ಜನತೆ ನಿರೀಕ್ಷಿಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *