Header Ads
Header Ads
Breaking News

ಕಾರ್ಕಳ : ಪರಂಪರೆ ಉಳಿಸಿಕೊಳ್ಳಲು ಗೂಡುದೀಪ ಸ್ಪರ್ಧೆ

ಆನೆಕೆರೆ ಸದ್ಯೋಜಾತ ಪಾರ್ಕ್‌ನಲ್ಲಿ ನಿನ್ನೆ ಸಂಜೆ ಹಬ್ಬದ ವಾತಾವರಣದಂತೆ ಕಂಡು ಬಂತು. ನಿನ್ನೆ ಸಂಜೆ ಈ ಪಾರ್ಕಿನಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಎಲ್ಲ ವಯಸ್ಸಿನವರು ಇಲ್ಲಿ ಹಾಜರಿದ್ದರು ಕಾರಣ ಇಲ್ಲಿ ನಿನ್ನೆ ಅಯೋಜಿಸಲಾದ ಗೂಡುದೀಪ ಸ್ಪರ್ಧೆ ಇಲ್ಲಿ ಸಾಂಪ್ರದಾಯಿಕವಾದ ಗೂಡುದೀಪಗಳು ಹಾಗೂ ಆಧುನಿಕ ಗೂಡುದೀಪಗಳು ಕಂಡುಬಂದವು ಒಣಮೆಣಸಿನಕಾಯಿಗಳಿಂದ ಮಾಡಿದ ಗೂಡುದೀಪ, ದವಸ ಧಾನ್ಯಗಳಿಂದ ಹಾಗೂ ಟೇಪ್ ರೆಕಾರ್ಡ್‌ಗಳ ಟೇಪ್‌ನಿಂದ ಮಾಡಿದ ವಿವಿಧ ರೀತಿಯ ವಸ್ತುಗಳಿಂದ ಮಾಡಿದ ನೂರಾರು ಗೂಡುದೀಪಗಳು ನೋಡ ಸಿಕ್ಕವು.

ಇತ್ತೀಚಿನ ದಿನಗಳಲ್ಲಿ ಗೂಡುದೀಪ ಎಂಬ ಸಂಪ್ರದಾಯ ಮಾಯವಾಗುತ್ತಿದೆ. ಈ ಗೂಡು ದೀಪದ ಪರಂಪರೆಯನ್ನು ಉಳಿಸಿಕೊಳ್ಳಲು ಈ ಸ್ಪರ್ಧೆ ಏರ್ಪಡಿಸಲಾಗುತ್ತದೆ ಎಂದು ಸಂಯೋಜಿಕರಾದ ಶುಭದ ರಾವ್ ಈ ಸಂದರ್ಭದಲ್ಲಿ ಹೇಳಿದರು ಈ ಸಂದರ್ಭದಲ್ಲಿ ವಿವೇಕ್ ಶೆಣೈ, ಪ್ರಸನ್ನ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply