Header Ads
Header Ads
Breaking News

ಕಾರ್ಕಳ ಪುರಸಭಾ ಸಾಮಾನ್ಯ ಸಭೆ

ಕಾರ್ಕಳ ಪುರಸಭಾ ಸಾಮಾನ್ಯ ಸಭೆಯು ಸುಮಾರು 3 ತಿಂಗಳ ನಂತರ ಮಂಜುನಾಥ ಪೈ ಸಭಾಭವನದಲ್ಲಿ ಜರುಗಿತು.ಈ ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದ ಶುಭಾದ್ ರಾವ್ ಮಾತನಾಡಿ ಎರಡೂವರೆ ವರ್ಷ ಬಿ.ಜೆ.ಪಿ ಆಡಳಿತದಲ್ಲಿ ಯಾವುದೇ ಜನಪರ ಕೆಲಸ ಆಗಲಿಲ್ಲ. ೧೦ ಅಂಕಗಳಲ್ಲಿ ಕೇವಲ ೫ ಅಂಕಗಳನ್ನು ಪುರಸಭೆಗೆ ಜನತೆ ನೀಡಿದ್ದಾರೆ ಎಂದರು. ಇದೇ ವೇಳೆ ಮಾತನಾಡಿದ ಉಪಾಧ್ಯಕ್ಷರಾದ ಗಿರಿಧರ ನಾಯ್ಕ್ ನಾವು ಆದಷ್ಟು ಜನಪರ ಕೆಲಸ ಮಾಡಿದ್ದೇವೆ ಕೆಲವು ಕಡೆ ಕಾಮಗಾರಿಗಳು ಬಾಕಿ ಇದೆ.

 

ಇದಕ್ಕೆ ನಾವು ಜನರಲ್ಲಿ ಕ್ಷಮೆ ಕೇಳುತ್ತೇವೆ ಎಂದರು. ಇಂದಿನ ಸಭೆಯಲ್ಲಿ ಯಾವುದೆ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯದೆ ಸದಸ್ಯರು ಭವನ್ಮಾತಕವಾಗಿ ಮಾತಾನಾಡಿಕೊಂಡರು. ಮಹಮ್ಮದ್ ಶರೀಫ್ ಮಾತಾನಾಡಿ ತನ್ನ ಅರ್ಹತ ಕಾಲದಲ್ಲಿ ಸಹಕರಿಸಿದ ಎಲ್ಲಾ ಸಿಬ್ಬಂದಿಗಳನ್ನು ಹಾಗೂ ಅಧಿಕಾರಿಯವರಿಗೆ ಕೃತ್ಙತೆ ಸಲ್ಲಿಸಿದರು ಎರಡೂವರೆ ವರ್ಷದಲ್ಲಿ ಕಾರ್ಕಳ ಪೇಟೆಯಲ್ಲಿ ಅಭಿವೃದ್ಧಿ ಕೆಲಸ ನಡೆಯದೆ ಇರುವುದಕ್ಕೆ ವಿಷಾಧ ವ್ಯಕ್ತ ಪಡಿಸಿದರು.ಸಭೆಯಲ್ಲಿ ಅನಿತಾ ಆರ್. ಅಂಚನ್ ಪುರಸಭಾಧಿಕಾರಿ ಮಾಬೇಲ್, ಡಿಸೋಜಾ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply