Header Ads
Header Ads
Breaking News

ಕಾರ್ಕಳ ಪುರಸಭೆಗೆ ಬಿಜೆಪಿಯ ಕೊಡುಗೆ ಶೂನ್ಯ. ಪುರಸಭೆಯಲ್ಲಿ ಮತ್ತೆ ಕಾಂಗ್ರೆಸ್ ಪಾಲಾಗಲಿದೆ. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ವಿಶ್ವಾಸ.

ಕಾರ್ಕಳ: ಪುರಸಭೆಯ ಅಭಿವೃದ್ಧಿಗೆ ಬಿಜೆಪಿಯ ಕೊಡುಗೆ ಶೂನ್ಯವಾಗಿದೆ. ಪುರಸಭೆಯಲ್ಲಿ ಬಹುತೇಕ ವರ್ಷಗಳಲ್ಲಿ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಾ ಬಂದಿದೆ. ನಾಗರಿಕರ ತೀರ್ಪಿಗೆ ವಿರುದ್ಧವಾಗಿ ಕಳೆದ ಎರಡುವರೆ ವರ್ಷ ಸಂಸದರ ಹಾಗೂ ಶಾಸಕರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ನಡೆಸಿದೆ. ಇದೀಗ ನಡೆಯುತ್ತಿರುವ ಚುನಾವಣೆಯಲ್ಲಿ ಕಾರ್ಕಳ ಪುರಸಭೆಯು ಮತ್ತೇ ಕಾಂಗ್ರೆಸ್ ಪಾಲಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಅವರು ಕಾರ್ಕಳದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಕಳ ಪುರಸಭೆಯ ಮೇಲಿಟ್ಟಿರುವ ಅಭಿಮಾನದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಿದಲ್ಲಿದ್ದಾಗ ಹಲವು ಯೋಜನೆಗಳನ್ನು ಮೊಟ್ಟ ಮೊದಲ ಭಾರಿಗೆ ಕಾರ್ಕಳದಲ್ಲಿಯೇ ಜಾರಿಗೊಳಿಸಲಾಗಿದೆ. ಒಳಚರಂಡಿ ಯೋಜನೆ, ಅಕ್ರಮ ಸಕ್ರಮ ಯೋಜನೆಯಡಿ ಆರ್ಹ ಫಲಾನುಭವಿಗಳಿಗೆ ಜಾಗ ಮಂಜೂರು ಘೋಷಣೆ ಹಾಗೂ ಮಂಜೂರು ಮಾಡಿರುವುದು ಇದರಲ್ಲಿ ಪ್ರಮುಖವಾಗಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಕಳ ಪುರಸಭಾ ಅಭಿವೃದ್ಧಿಗಾಗಿ ರೂ.೧೫ ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸಿದರು. ಶಾಸಕ ಸುನೀಲ್‌ಕುಮಾರ್ ಆಗಲಿ, ಸಂಸದೆ ಶೋಭಾ ಕೆರಂದ್ಲಾಜೆ ಅವರಾಗಲಿ ಅಥವಾ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾರ್ಕಳ ಪುರಸಭೆಯ ಅಭಿವೃದ್ಧಿಗೆ ನೀಡಿದ ಕೊಡುಗೆಯಾದರೂ ಏನೆಂದು ಸವಾಲು ಹಾಕಿದರು.ಮಾಜಿ ಶಾಸಕ ಹೆಚ್.ಗೋಪಾಲಭಂಡಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ನೀರೆಕೃಷ್ಣಶೆಟ್ಟಿ, ಸುಧಾಕರ ಕೊಟ್ಯಾನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ, ಹರ್ಷ ಮೊಯಿಲಿ, ಇಮ್ತಿಯಾಜ್ ಅಹಮ್ಮದ್, ಸುಬೀತ್ ಎನ್.ಆರ್, ಬಿಪಿನ್‌ಚಂದ್ರಪಾಲ್ ನಕ್ರೆ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply