Header Ads
Header Ads
Header Ads
Breaking News

ಕಾರ್ಕಳ ಪುರಸಭೆಯಲ್ಲಿ ಬೃಹತ್ ಪ್ರತಿಭಟನೆ ಮೂಂಡ್ಲಿಯಲ್ಲಿ ಪೈಪ್ ಲೈನ್ ತುಂಡಾಗಿದ್ದ ಪರಿಣಾಮ ಒಂದು ತಿಂಗಳಿನಿಂದ ಮನೆಗಳಿಗೆ ಕೊಳಚೆ ನೀರು ಸರಬರಾಜು ಕಾಂಗ್ರೆಸ್ ಸದಸ್ಯರಿಂದ ಪಂಚಾಯತ್ ವಿರುದ್ಧ ಆಕ್ರೋಶ

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿಂದ ರಾಮಸಮುದ್ರದ ಕೆಸರು ಮಿಶ್ರಿತ ಕೊಳಚೆ ನೀರು ಕಾರ್ಕಳದ ಪುರಸಭೆ ನಿವಾಸಿಗಳ ಅರಿವಿಗೆ ಬಾರದೆ ಸರಬರಾಜು ಮಾಡುತ್ತಿರುವ ಬಿಜೆಪಿ ಆಡಳಿತಕ್ಕೆ ದಿಕ್ಕಾರ ಹಾಕಿದರು. ಕಳೆದ ಒಂದು ತಿಂಗಳಿಂದ ಕಾರ್ಕಳಕ್ಕೆ ನೀರು ಸರಬರಾಜು ಆಗುತ್ತಿರುವ ಮುಂಡ್ಲಿ ಆನೆಕಟ್ಟಿನಲ್ಲಿ ಮುಖ್ಯ ನೀರಿನ ಪೈಪಿಗೆ ಹಾನಿಯಾಗಿರುದರಿಂದ ಅದನ್ನು ದುರಸ್ತಿ ಮಾಡದೆ ರಾಮಸಮುದ್ರದ ಕೊಳಚೆಯ ನೀರನ್ನು ಸರಬರಾಜು ಮಾಡುವುದು ವಿಷಾದದ ಸಂಗತಿಯಾಗಿದೆ ಇದರಿಂದ ಈಗಾಗಲೇ ಕೆಲವು ಜನರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಇನ್ನು 24 ಗಂಟೆಯೊಳಗೆ ಕಾರ್ಕಳ ಪುರಸಭೆಯವರು ಶುದ್ಧ ನೀರನ್ನು ಸರಬರಾಜು ಮಾಡದಿದ್ದರೆ ಬೃತಹತ್ ಪ್ರತಿಭಟನೆ ಮಾಡಲಾಗುವುದು ಎಂದು ಸುಭದ್ ರಾವ್ ಹೇಳಿದರು. ಈ ಸಂದರ್ಭದಲ್ಲಿ ರಮಮ್ಮದ್ ಶೇಖ್, ಮೊಹಮ್ಮದ್ ಶರೀಪ್, ಪ್ರತಿಮಾ ಮೋಹನ್, ವಂದನಾ, ಅಕ್ಷಯ ರಾವ್ ಮುಂತಾದವರು ಪ್ರತಿಭಟಣೆಯಲ್ಲಿ ಭಾಗವಹಿಸಿದ್ದರು.

Related posts

Leave a Reply