Header Ads
Header Ads
Breaking News

ಕಾರ್ಕಳ ಪುರಸಭೆಯಲ್ಲಿ ಮತಯಂತ್ರ ಪ್ರಾತ್ಯಾಕ್ಷತೆ ಪುರಸಭೆ ಅಧಿಕಾರಿ ಮಾಬೆಲ್ ಡಿಸೋಜಾರಿಂದ ಮಾಹಿತಿ

ರಾಜ್ಯ ವಿಧಾನಸಭೆಯ ಚುನಾವಣೆಯ ಹಿನ್ನಲೆಯಲೆಯಲ್ಲಿ ಕಾರ್ಕಳ ಪುರಸಭೆಯಲ್ಲಿ ಮತಯಂತ್ರ ಪ್ರತ್ಯಾಕ್ಷತೆ ಜರುಗಿತು.ಈ ಸಂದರ್ಭದಲ್ಲಿ ಮತಯಂತ್ರಕ್ಕೆ ಸಂಬಂಧ ಪಟ್ಟ ಸಿಬ್ಬಂದಿಗಳು ಮತಯಂತ್ರವನ್ನು ಹೇಗೆ ಬಳಕೆ ಮಾಡಬೇಕು ಎಂದು ವಿವರಿಸಿದರು.

ನಂತರ ಮಾತನಾಡಿದ ಪುರಸಭೆ ಅಧಿಕಾರಿ ಮಾಬೆಲ್ ಡಿಸೋಜಾ ಭಾರತ ಸರಕಾರದ ಚುನಾವಣೆ ಆಯೋಗದಿಂದ ಬಂದ ವಿದ್ಯತ್‌ಮಾನ ಮತಯಂತ್ರಗಳು ಮೊದಲ ಬಾರಿಗೆ ಕರ್ನಾಟಕದಲ್ಲಿ ಮುಂದೆ ಜರುಗುವ ವಿಧಾನ ಸಭೆಯ ಚುನಾವಣೆ ಬಳಕೆಯಾಗುತ್ತದೆ. ಇದರಿಂದ ನಾವು ಯಾರಿಗೆ ಮತಚಲಾಯಿಸಿದ್ದೇವೆ ಎಂದು ಖಾತ್ರಿ ಮಾಡಿಕೊಳ್ಳ ಬಹುದು ಎಂದು ಹೇಳಿದರು ಈ ಸಂಧರ್ಭದಲ್ಲಿ ಪುರಸಭೆ ಸಿಬ್ಬಂದಿಗಳು ಹಾಗೂ ಪುರಸಭೆಯ ಕೆಲವು ಸದಸ್ಯರು ಪ್ರಾಯೋಗಿಕವಾಗಿ ಮತ ಚಲಾಯಿಸಿ ತಮ್ಮ ಮತಗಳನ್ನು ಖಾತ್ರಿ ಮಾಡಿಕೊಂಡರು.

ವರದಿ: ಕೆಎ.ಎಂ. ಖಲೀಲ್ ಕಾರ್ಕಳ

Related posts