Header Ads
Header Ads
Breaking News

ಕಾರ್ಕಳ ಪುರಸಭೆಯಿಂದ ಕಲುಷಿತ ನೀರು ಸರಬರಾಜು ಬಂಗ್ಲೆಗುಡ್ಡೆ ಹಾಗೂ ಸದ್ದಭಾವನ ನಗರಕ್ಕೆ ನೀರಿನ ವ್ಯವಸ್ಥೆ

ಕಾರ್ಕಳದ ಬಂಗ್ಲೆಗುಡ್ಡೆ ಹಾಗೂ ಸದ್ಬಾವನ ನಗರಕ್ಕೆ ಸರಬರಾಜಾಗುತ್ತಿದ್ದ ಬಾವಿ ನೀರು ಸಂಪೂರ್ಣ ಕಲುಷಿತಗೊಂಡಿದೆ. ಪುರಸಭೆಯವರು ಸ್ಥಳೀಯ ನಿವಾಸಿಗಳ ಗಮನಕ್ಕೆ ತಾರದೆ ನೀರು ಸರಬರಾಜು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಾರ್ಕಳ ಪುರಸಭೆ ವ್ಯಾಪ್ತಿಯ 2 ನೇ ವಾರ್ಡಿನ ಗುಂಡ್ಯ ಎಂಬಲ್ಲಿ ಬಂಗ್ಲಗುಡ್ಡೆ ಹಾಗೂ ಸದ್ದಭಾವನ ನಗರಕ್ಕೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಪುರಸಭೆಯಿಂದ ಬಾವಿಯನ್ನು ತೋಡಲಾಗಿತ್ತು. ಇದರಿಂದ ಬೆಳಿಗ್ಗೆ ಮತ್ತು ಸಂಜೆ ನೀರು ನೇರವಾಗಿ ಮನೆ ಮನೆಗೆ ಸರಾಬರಾಜು ಮಾಡಲಾಗುತ್ತಿದೆ. ಆದರೆ ಮಳೆಗಾಲ ಮುಗಿದ ನಂತರ ಬಾವಿಯ ನೀರು ಕಲುಷಿತಗೊಂಡು ನೀರಿನ ಬಣ್ಣ ಬದಲಾಗಿದೆ. ಬಾವಿಯಲ್ಲಿ ಕಸ ಕಡ್ಡಿ ಎಲೆಗಳು ಬಿದ್ದು ಕೆಟ್ಟ ವಾಸನೆ ಬರುತ್ತಿದ್ದು, ನೀರನ್ನು ಬಳಕೆ ಮಾಡಲು ಸಾಧ್ಯವಾಗದ ಸ್ಥಿತಿ ಬಂದೋದಗಿದೆ. ಪುರಸಭೆಯವರು ಸ್ಥಳೀಯ ನಿವಾಸಿಗಳ ಗಮನಕ್ಕೆ ತಾರದೆ ನೀರು ಸರಾಬರಾಜು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Related posts

Leave a Reply