Header Ads
Header Ads
Header Ads
Breaking News

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಅಳೆತ್ತರಕ್ಕೆ ಬೆಳೆದ ಕಳೆಗಳು ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ

 

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಮಳೆಗಾಲ ಪ್ರಾರಂಭವಾದ ನಂತರ ಎಲ್ಲಾ ೨೩ ವಾರ್ಡುಗಳಲ್ಲಿ ಕಳೆಗಳು ಅಳೆತ್ತರಕ್ಕೆ ಬೆಳೆದು ನಿಂತಿದೆ. ಅ ಕಳೆಗಳನ್ನು ಪುರಸಭೆ ವತಿಯಿಂದ ಮಳೆಗಾಲ ಪ್ರಾರಂಭವಾದ ಕೂಡಲೇ ಕತ್ತರಿಸಿ ತೆಗೆಯಬೇಕಿತ್ತು.

ಅದರೆ ಮಳೆಗಾಲ ಮುಕ್ತಾಯದ ಹಂತದಲ್ಲಿ ಇದ್ದರು ಪುರಸಭೆಯು ಕಣ್ಣು ಮುಚ್ಚಿ ಕುಳಿತಿದೆ. ೨೩ ವಾರ್ಡುಗಳಲ್ಲಿ ಸುಮಾರು ೨೫ ಸಾವಿರ ಜನಸಂಖ್ಯೆ ಇದೆ ಆದರೆ ಪುರಸಭೆಯವರು ಕೇವಲ ಒಂದೇ ಒಂದು ಯಂತ್ರದಿಂದ ಕಳೆಕೀಳುವ ಮಹಾನ್ ಕಾರ್ಯ ಮಾಡುತ್ತಿದೆ. ಕೆಲದಿನಗಳ ಹಿಂದೆ ಈ ಕಳಕೆಗಳ ಮಧ್ಯೆ ಅವಿತುಕೊಂಡಿರುವ ವಿಷಜಂತು ಇಬ್ಬರಿಗೆ ಕಡಿದ ವರದಿ ಆಗಿದೆ. ಆದರೂ ಪುರಸಭೆ ಗೊತ್ತಿದ್ದು ಗೊತ್ತಿಲ್ಲದ ಹಾಗೆ ವರ್ತಿಸುತ್ತದೆ.

Related posts

Leave a Reply