Header Ads
Breaking News

ಕಾರ್ಕಳ ಪುರಸಭೆ ಸಾಮಾನ್ಯ ಸಭೆಯಲ್ಲಿ ವಾಗ್ದಾಳಿ-ಗದ್ದಲ-ಕೋಲಾಹಲ

ಪುರಸಭೆ ಸಾಮಾನ್ಯ ಸಭೆ ಪ್ರಾರಂಭವಾಗುತ್ತಿದ್ದಂತೆ ಮೂರನೇ ಬಾರಿಗೆ ಬಂಡಿಮಠ ನೀರಿನ ಸಮಸ್ಯೆ ಕುರಿತು ಪ್ರಸ್ತಾಪವಾಗಿರುವುದು ಕಾಂಗ್ರೆಸ್-ಬಿಜೆಪಿ ಸದಸ್ಯರ ಮಧ್ಯೆ ತೀವ್ರ ವಾಗ್ದಾಳಿ-ಗದ್ದಲ-ಕೋಲಾಹಲಕ್ಕೆ ಕಾರಣವಾಯಿತು. ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ ಅವರ ಅಧ್ಯಕ್ಷತೆಯಲ್ಲಿ ಪುರಸಭಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯೆ ಪ್ರತಿಮಾ ರಾಣೆ ಅವರು ರಾಜ್ಯ ಸಭಾ ಸದಸ್ಯರ ಅನುದಾನದಲ್ಲಿ ಬಂಡಿಮಠದ ನೀರಿನ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ 30 ಲಕ್ಷ ರೂ. ಮಂಜೂರಾಗಿದ್ದು ಆ ಹಣ ವಾಪಾಸಗಿದೆ. ಅನುದಾನವನ್ನು ನನ್ನ ವಾರ್ಡ್‍ಗೆ ತರಿಸಿಕೊಡುವಂತೆ ಸಭೆಯನ್ನು ಆಗ್ರಹಿಸುತ್ತಿದ್ದಂತೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಎರಡು ಸಾಮಾನ್ಯ ಸಭೆಯೂ ಇದೇ ವಿಚಾರಕ್ಕೆ ಬಲಿಯಾಗಿದೆ. ಆ ಕುರಿತು ಇಲ್ಲಿ ಚರ್ಚೆ ಮಾಡಿ ಸಮಯ ವ್ಯರ್ಥ ಮಾಡುವುದು ಬೇಡ. ಮುಖ್ಯಾಧಿಕಾರಿ ಅವರೊಂದಿಗೆ ಕೂತು ಮಾತನಾಡಿ ಎಂದು ಅಧ್ಯಕ್ಷರು ಹೇಳಿದರು. ಈ ರೀತಿ ಹೇಳಿದ್ದೇ ತಡ ವೇದಿಕೆ ಮುಂಭಾಗ ಬಂದ ಪ್ರತಿಮಾ ರಾಣೆ ಅವರು ಅಧ್ಯಕ್ಷರ ವಿರುದ್ಧ ರೇಗಾಡಿದರು.

ಈ ವೇಳೆ ಆಡಳಿತ ಪಕ್ಷದ ಸದಸ್ಯರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ-ವಿರೋಧ ಪಕ್ಷಗಳ ಮಧ್ಯೆ ಮಾತಿನ ಚಕಮಕಿ ನಡೆದು ಇಡೀ ಸಭೆ ಗದ್ದಲದ ಗೂಡಾಯಿತು.
ಈ ವೇಳೆ ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಮಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ನೀತಾ ಆಚಾರ್ಯ, ರೆಹಮತ್ ಬಾನು, ಮತ್ತಿತರರು ಸಭೆಯಲ್ಲಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *