Header Ads
Header Ads
Breaking News

ಕಾರ್ಕಳ: ಫ್ಲೋರಿನಾ ಡಿಸೋಜಾ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸು ಆಗಿದ್ದಾರೆ.

ಕುಕ್ಕುಂದೂರು ಅಯ್ಯಪ್ಪ ನಗರದ ಕೆರ್ತಾಡಿಯ ಮನೆಯಲ್ಲಿ ವಾಸ್ತವ್ಯ ಇದ್ದ ಮಹಿಳೆ ಫ್ಲೋರಿನಾ ಡಿಸೋಜಾ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸು ಆಗಿದ್ದಾರೆ.ಮೂಲತಃ ಹೊಸ್ಮಾರ್ ನಿವಾಸಿಯಾಗಿದ್ದು, ಪ್ರಸ್ತುತ ಉಳ್ಳಾಲದಲ್ಲಿರುವ ಪತ್ನಿಯ ಮನೆಯಲ್ಲಿ ವಾಸ್ತವ್ಯ ಇದ್ದ ಮಹಮ್ಮದ್ ರಿಯಾಸ್(೩೩) ಬಂಧಿತ ಆರೋಪಿ. ಜುಲಾಯಿ ೮ರಂದು ಈ ಕೃತ್ಯ ಎಸಗಿ ರಾಜಸ್ಥಾನದ ಅಜ್ಮೀರ್ ದರ್ಗಾ ದರ್ಶನಗೈದು ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಪಡೆದ ಕಾರ್ಕಳ ವೃತ್ತನಿರೀಕ್ಷಕ ಜಾಯ್ ಅಂತೋನಿ ನೇತೃತ್ವದ ಪೊಲೀಸರ ತಂಡವು ಮುಂಬಯಿಯಲ್ಲಿ ಬಂಧಿಸಿ ಕಾರ್ಕಳಕ್ಕೆ ಕರೆದುಕೊಂಡು ತಂದಿದ್ದಾರೆ.ಯುಎಇಯಲ್ಲಿ ಕೇಬಲ್ ವ್ಯವಹಾರ ನಡೆಸುತ್ತಿದ್ದ ಮಹಮ್ಮದ್ ರಿಯಾಸ್ ಕಳೆದ ಕೆಲ ವರ್ಷಗಳ ಹಿಂದೆ ಊರಿಗೆ ಹಿಂತಿರುಗಿದ. ಆ ಸಂದರ್ಭದಲ್ಲಿ ಫ್ಲೋರಿನಾ ಮಚೋಡಾ ಅಲಿಯಾಸ್ ಫ್ಲೋರಿನಾ ಡಿಸೋಜಾ ಫೇಸ್‌ಬುಕ್ ಮೂಲಕ ಪರಿಚಯವಾಗಿತ್ತು.
ಪತಿಯಿಂದ ದೂರ ಉಳಿದಿದ್ದ ಫ್ಲೋರಿನಾ ಮಚೋಡಾಳ ಸಂಪೂರ್ಣ ಜಾತಕ ಪಡೆದುಕೊಂಡಿದ್ದ ಮಹಮ್ಮದ್ ರಿಯಾಸ್, ಆಕೆಗೆ ಸಕಲ ರೀತಿಯಲ್ಲಿ ನೆರವು ನೀಡುವ ಮೂಲಕ ಮನ ಗೆಲ್ಲುವಲ್ಲಿ ಸಫಲನಾದನು. ಈ ಎಲ್ಲಾ ಬೆಳವಣಿಗೆಯ ನಡುವೆ ಮಹಮ್ಮದ್ ರಿಯಾಸ್ ತನ್ನಲ್ಲಿದ್ದ ಹಾಗೂ ಚಿಟ್ ಫಂಡ್‌ನಿಂದ ಪಡೆದುಕೊಂಡ ಒಟ್ಟು 13ಲಕ್ಷ ನಗದನ್ನು ಫ್ಲೋರಿನಾಳಿಗೆ ಒಪ್ಪಿಸಿದನೆಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಅದೇ ನಗದು ಮುಂದಿಟ್ಟು ಫ್ಲೋರಿನಾ ತನ್ನ ಬಡ್ಡಿ ವ್ಯಾಪಾರವನ್ನು ವಿಸ್ತರಿಸಿ ಜೀವಕಳೆದು ಕೊಳ್ಳಬೇಕಾಯಿತು.

Related posts

Leave a Reply