Header Ads
Breaking News

ಕಾರ್ಕಳ ಬಂಗ್ಲೆಗುಡ್ಡೆಯಲ್ಲಿ ಜಮೀಯತುಲ್ ಫಲಾಹ್ ಘಟಕದಿಂದ ಇಫ್ತಾರ್ ಕೂಟ

ಕಾರ್ಕಳ ಬಂಗ್ಲೆಗುಡ್ಡೆ ನೂರ್ ಮಸೀದಿಯಲ್ಲಿ ಜಮೀಯತುಲ್ ಫಲಾಹ್ ಘಟಕದಿಂದ ಇಫ್ತಾರ್ ಕೂಟ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಕಳ ಮುಸ್ಲಿಂ ಜಮಾತ್ ಅಧ್ಯಕ್ಷರಾದ ಅಶ್ಪಕ್ ಅಹಮ್ಮದ್, ಪವಿತ್ರ ರಂಜಾನ್ ಉಪವಾಸದ ಮಹತ್ವವನ್ನು ತಿಳಿಸಿದರು. ನಂತರ ಮಾತನಾಡಿದ ಮಾಜಿ ಶಾಸಕರಾದ ಎಚ್ ಗೋಪಾಲ ಭಂಡಾರಿಯವರು, ಎಲ್ಲ ಧರ್ಮಗಳಲ್ಲಿ ಒಂದೇ ಸಂದೇಶವಿದ್ದು ಮಾನವೀಯ ಮೌಲ್ಯಗಳನ್ನು ಪ್ರತಿ ಪಾಲನೆ ಮಾಡುವಂತಹ ಆದೇಶ ಕುರಾನ್‌ನಲ್ಲಿ ಇದೆ ಎಂದರು. ರಂಜಾನ್ ಅತಿ ಪವಿತ್ರವಾದ ತಿಂಗಳಾಗಿರುತ್ತದೆ. ಈ ಸಂದರ್ಭದಲ್ಲಿಉಳ್ಳವನು ಬಡಬಗ್ಗರಿಗೆ ದಾನವನ್ನು ಮಾಡುತ್ತಾನೆ ಎಂದರು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಮೋಹಮ್ಮದ್ ಶರೀಫ್, ಮುಸ್ಲಿಂ ಜಮಾತ್ ಅಧ್ಯಕ್ಷರಾದ ಅಶ್ಫಾಕ್ ಅಹಮದ್. ಮೊಹಮ್ಮದ್ ಇಕ್ಬಾಲ್ ತಾಹಿರ್ ಹುಸೇನ್ ಅಬ್ದುಲ್ ರಶೀದ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *