Header Ads
Breaking News

ಕಾರ್ಕಳ : ಬಂಗ್ಲೆಗುಡ್ಡೆ ತೊಯಿಬಾ ಗಾರ್ಡನ್‌ನಲ್ಲಿ ಸರ್ವ ಧರ್ಮೀಯರಿಗೆ ಇಫ್ತಾರ್ ಕೂಟ

ಜಂಇಯ್ಯತುಲ್ ಫಲಾಹ್ ಕಾರ್ಕಳ ಘಟಕದಿಂದ ಬಂಗ್ಲೆಗುಡ್ಡೆಯ ತೊಯಿಬಾ ಗಾರ್ಡನ್‌ನಲ್ಲಿ ಸರ್ವ ಧರ್ಮೀಯರಿಗೆ ಇಫ್ತಾರ್ ಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಜಂಇಯ್ಯತುಲ್ ಫಲಾಹ್ ಅಧ್ಯಕ್ಷರಾದ ಮೊಹಮ್ಮದ್ ಶರೀಫ್ ಪ್ರಾಸ್ತಾವಿಕ ಭಾಷಣ ಮಾಡಿದರು. ನಂತರ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲರಾದ ಶರೀಫ್ ಸಹದಿ ಅವರು, ಈ ತಿಂಗಳಲ್ಲಿ ಮುಸ್ಲಿಮರು ೩೦ ದಿನಗಳ ಕಾಲ ಕಡ್ಡಾಯವಾಗಿ ಉಪವಾಸ ವ್ರತವನ್ನು ಆಚರಿಸಲೇ ಬೇಕು.

ನಂತರ ತನ್ನ ಸಂಪತ್ತಿನ ಶೇಕಡ ಎರಡು ಅಂಶವನ್ನು ಬಡಬಗ್ಗರಿಗೆ ದಾನ ಮಾಡಬೇಕು. ಯಾವನೇ ಬಡವನು ಹಸಿವಿನಿಂದ ಇರಬಾರದು ಇದುವೇ ರಂಜಾನ್ ತಿಂಗಳ ವಿಶೇಷತೆ ಎಂದು ಹೇಳಿದರು. ನಂತರ ಮಾತನಾಡಿದ ತಾಲೂಕು ದಂಡಾಧಿಕಾರಿ ಪುರಂದರ ಹೆಗಡೆ ಅವರು, ನಾವು ಇವತ್ತು ಒಂದೇ ಸೂರಿನಡಿಯಲ್ಲಿ ಸೇರಿಪವಿತ್ರ ಇಫ್ತಾರ್ ಅನ್ನು ಮಾಡುತ್ತಿದ್ದೇವೆ. ಇದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತದೆ ಎಂದು ಹೇಳಿದರು. ವೇದಿಕೆಯಲ್ಲಿ ಮುಸ್ಲಿಂ ಜಮಾತ್ ಅಧ್ಯಕ್ಷರಾದ ಅಸ್ಫ್ಯಾಕ್ ಅಹಮದ್. ಕಾರ್ಕಳ ತಾಲೂಕು ಪತ್ರಕರ್ತರ ಅಧ್ಯಕ್ಷ ಆರ್. ಬಿ. ಜಗದೀಶ್. ನೇಮಿರಾಜ ರೈ. ರಾಜೇಶ್ ರಾವ್, ಉದ್ಯಮಿ ಮಹಮ್ಮದ್ ಗೌಸ್, ಘಟಕದ ಕಾರ್ಯದರ್ಶಿ ಸುಲೇಮಾನ್ ಹಾಜಿ ಇನ್ನಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *