Header Ads
Header Ads
Breaking News

ಬಂಡಿಮಠದ ಇಂದಿರಾ ಕ್ಯಾಂಟೀನ್ ನ ಅಸಮರ್ಪಕ ಒಳಚರಂಡಿ ವ್ಯವಸ್ಥೆ ||ದೂರು ನೀಡಿದರೂ ಎಚ್ಚೆತ್ತುಕೊಳ್ಳದ ಪುರಸಭೆ

ಕಾರ್ಕಳ ಬಂಡಿಮಠ ಐದನೇ ವಾರ್ಡಿನಲ್ಲಿರುವ ಇಂದಿರಾ ಕ್ಯಾಂಟೀನ್ ನೀರಿನ ತ್ಯಾಜ್ಯ ಹರಿದು ಹೋಗಲು ಒಳಚರಂಡಿ ವ್ಯವಸ್ಥೆ ಮಾಡಿದ್ದಾರೆ. ಈ ಕ್ಯಾಂಟೀನಿನ ಕೆಲವೇ ದೂರ 10 ಅಡಿ ಆಳದ ಕಾಂಕ್ರೀಟ್ ಬಾವಿಯಲ್ಲಿ ಇಲ್ಲಿಯ ತ್ಯಾಜ್ಯ ಶೇಖರಣೆಯಾಗಿ ಅಲ್ಲಿಂದ ಮುಖ್ಯ ಒಳಚರಂಡಿ ಎಲ್ಲಿ ಹರಿದುಹೋಗುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಗುತ್ತಿಗೆದಾರರ ಕಳಪೆ ಕಾಮಗಾರಿಕೆಯಿಂದ ಕಾಂಕ್ರೀಟ್ ಬಾವಿಯ ತ್ಯಾಜ್ಯ ಒಳಚರಂಡಿಗೆ ಸೇರದೆ ಇಲ್ಲಿ ಅಕ್ಕಪಕ್ಕದಲ್ಲಿ ಹರಿದುಹೋಗಿ ದುರ್ವಾಸನೆ ಬೀರುತ್ತದೆ. ಅದಲ್ಲದೇ ತ್ಯಾಜ್ಯಗುಂಡಿಯ ಸ್ವಲ್ಪವೇ ದೂರದಲ್ಲಿ ಬಾವಿಯಿದ್ದು ಆ ಬಾವಿಯ ನೀರು ಕೂಡಾ ಹಾಳಾಗಿದೆ. ಇಲ್ಲಿಯ ಮನೆಯವರಿಗೆ ಮಳೆಗಾಲದಲ್ಲಿ ಕೂಡನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಉಂಟಾಗಿದೆ. ಅದಲ್ಲದೆ ಈಗಾಗಲೇ ಈ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾಗಿದೆ. ಆದರೂ ಕೂಡ ಕಾರ್ಕಳ ಪುರಸಭೆ ಈ ಸಮಸ್ಯೆಗೂ ನಮಗೂ ಸಂಬಂಧ ವಿಲ್ಲದಂತೆ ವರ್ತಿಸುತ್ತದೆ. 4 ವರ್ಷಗಳ ಹಿಂದೆ ಸ್ವಚ್ಛ ಪುರಸಭೆ ಎಂಬ ಪ್ರಶಸ್ತಿಯನ್ನು ಕೂಡ ಪುರಸಭೆ ಪಡೆದಿತ್ತು.

Related posts

Leave a Reply

Your email address will not be published. Required fields are marked *