Header Ads
Header Ads
Breaking News

 ಕಾರ್ಕಳ : ಬೆಳ್ಮಣ್‌ನಲ್ಲಿ ಬೀದಿಗೆ ಬಿದ್ದ ಕುಟುಂಬದ ಪರದಾಟ

 

ಐದು ಮನೆಗಳನ್ನು ಧರಶಾಹಿ ಮಾಡಿ ಪಿಡಿಒ ಹಾಗೂ ಅಧಿಕಾರಿಗಳು ಮನೆಗೆ  ತೆರಳಿದ್ದಾರೆ, ಇತ್ತಾ ಬೀದಿ ಪಾಲಾದ ಕುಟುಂಬಗಳು ರಾತ್ರಿಯಿಡೀ ಅಳುತ್ತಲೇ ಕಾಲ ಕಳೆದಿದೆ. ಬಿರುಬಿಸಿಲಿನ ನಡುವೆ ಮರಿಮಕ್ಕಳ ಸಹಿತ ಬಾರೀ ಅಕ್ರೋಶ ವ್ಯಕ್ತವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಜನತೆ ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಳ್ಮಣ್ ಜಂತ್ರ ಬಳಿಯ ಸರಕಾರಿ ಭೂಮಿಯಲ್ಲಿ ವಾಸವಾಗಿದ್ದ ಮಂಜುಳ, ಸೇವಂತಿ, ವನಿತಾ, ಗೌರಿ ಮತ್ತು ಅಕ್ಷತಾ ಮೂಲ್ಯ ಎಂಬವರ ಮನೆಗಳು ಧರಶಾಹಿಯಾಗಿದೆ. ಕುಳಿತುಕೊಳ್ಳಲು ಸೂರು ಇಲ್ಲದೆ ರಸ್ತೆ ಬುಡದಲ್ಲೇ ಮಲಗಿದ ಈ ಕುಟುಂಬಗಳು, ಜನಪ್ರತಿನಿಗಳು ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.ಕುಟುಂಬಿಕರ ಮನೆಯನ್ನು ಕೆಡಹಿ ಬೀದಿ ಪಾಲು ಮಾಡುವ ಬದಲು, ಆ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬಹುದಿತ್ತಲ್ಲವೇ ? ಹೀಗೆನ್ನುತ್ತಾರೆ ಗ್ರಾಮಸ್ಥರು. ಅವರೇನು ಪಾಕಿಸ್ಥಾನದಿಂದ ಬಂದ ವಲಸಿಗರೇ..?. ಅನ್ಯ ಜಿಲ್ಲೆಯವರು ಎನ್ನುವ ಕಾರಣಕ್ಕೆ ಅವರ ಮೇಲೆ ಎರಗಿದ್ದಾರೆ ಎನ್ನಲು, ಅವರಲ್ಲಿ ಆಧಾರ್‌ಕಾರ್ಡ್, ಗ್ಯಾಸ್ ಸಿಲಿಂಡರ್ ಜತೆಗೆ ಅನುದಾನ ದಾಖಲೆ ಪತ್ರಗಳಿದ್ದವು. ಬೆಳ್ಮಣ್ ಗ್ರಾ.ಪಂ.ಆಡಳಿತ ಮತ್ತು ಸ್ಥಾಪಿತ ಹಿತಾಸಕ್ತಿಗಳ ಕೈವಾಡದ ಜತೆಗೆ ಗ್ರಾ.ಪಂ.ಸದಸ್ಯರು ಕೈಜೋಡಿಸಿದ್ದೇ ಈ ಘಟನೆಗೆ ಕಾರಣವಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿದೆ.

Related posts

Leave a Reply

Your email address will not be published. Required fields are marked *