Header Ads
Breaking News

ಕಾರ್ಕಳ-ಮಂಗಳೂರು ರಸ್ತೆ ಅವೈಜ್ಞಾನಿಕ ಕಾಮಗಾರಿ : ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆ

ಕಾರ್ಕಳದಿಂದ ಮಂಗಳೂರು ಸಂಪರ್ಕಿಸುವ ರಸ್ತೆಯ ಆನೆಕೆರೆ ಮುಖ್ಯರಸ್ತೆಯಲ್ಲಿ ವರ್ಷಗಳ ಹಿಂದೆ ಇಂಟರ್ ಲಾಕ್ ಅಳವಡಿಸಲಾಗಿತ್ತು. ರಸ್ತೆಯ ಮಧ್ಯ ಭಾಗದಲ್ಲಿ ಒಳಚರಂಡಿ ಮ್ಯಾನ್ಹೋಲ್ ಇದ್ದು ಅದು ಕೆಲವು ತಿಂಗಳ ಹಿಂದೆ ಕುಸಿದ ಕಾರಣ ರಸ್ತೆ ಮಧ್ಯೆ ಭಾರಿಗಾತ್ರದ ಹೊಂಡ ನಿರ್ಮಾಣವಾಗಿ ವಾಹನ ಚಾಲಕರಿಗೆ ಹಾಗೂ ಪಾದಚಾರಿಗಳಿಗೆ ತುಂಬಾ ತೊಂದರೆಯಾಗುತ್ತಿತ್ತು.
ಈ ಸಮಸ್ಯೆಯನ್ನು ಹಲವು ಬಾರಿ ಪುರಸಭೆಯ ಅಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಲಿಲ್ಲ. ಇಂದು ಸ್ಥಳೀಯ ನಾಗರಿಕರು ಕುಸಿದ ಹೊಂಡಕ್ಕೆ ಆನೆ ಕಡ್ಡಾಯ ಎಂಬ ಹೆಸರನ್ನಿಟ್ಟು ಪುರಸಭೆಯ ಅಧಿಕಾರಿ ವಿರುದ್ಧ ಘೋಷಣೆ ಹಾಕಿದರು. ತಕ್ಷಣ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಒಂದೆರಡು ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ಕೊಟ್ಟ ನಂತರ ಪ್ರತಿಭಟನಕಾರರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು. ಈ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯ ಪ್ರಕಾಶ್ ರಾವ್ ಅಶೋಕ್ ಸುವರ್ಣ, ವಿಘ್ನೇಶ್, ವಿಜಯ ಸಫಲಿಗ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *