Header Ads
Breaking News

ಕಾರ್ಕಳ: ಮರಳುಗಾರಿಕೆ ನೀತಿ ವಿರೋಧಿಸಿ ಕಾರ್ಮಿಕರಿಂದ ಪ್ರತಿಭಟನೆ

ಕಾರ್ಕಳ ತಾಲೂಕಿನಲ್ಲಿ ಮರಳು ನೀತಿ ವಿರೋಧಿಸಿ ಕಟ್ಟಡ ಮತ್ತು ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಕಾರ್ಕಳ ಬಂಡಿ ಮಠದಲ್ಲಿ ಕಟ್ಟಡ ಕಾರ್ಮಿಕರ ಹಾಗೂ ಗುತ್ತಿಗೆದಾರರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಲಾರಿ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಉದಯ ಕುಮಾರ್ ಹೆಗಡೆ ಅವರು, ಕೇವಲ ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ತಲೆದೋರಿರುವ ಮರಳು ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಂಡು ಕಟ್ಟಡ ಕಾರ್ಮಿಕರು ಗುತ್ತಿಗೆದಾರರು ಹಾಗೂ ವಾಹನ ಚಾಲಕರು ಮತ್ತು ಮಾಲೀಕರು ಬೀದಿಗೆ ಬಂದು ಬೀಳುವ ಪರಿಸ್ಥಿತಿ ಉಂಟಾಗಿದೆ. ಈ ಸಮಸ್ಯೆ ಬಗ್ಗೆ ಹಲವಾರು ಬಾರಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ರಾಜಕೀಯ ಮುಖಂಡರ ಬಳಿ ತಮ್ಮ ಅಸಹಾಯಕತೆ ತೋಡಿಕೊಂಡರು. ಈ ಸಮಸ್ಯೆಗೂ ಮರಳು ನೀತಿಗೆ ನಮಗೆ ಯಾವ ರೀತಿಯ ಸಂಬಂಧ ವಿಲ್ಲದಂತೆ ವರ್ತಿಸುತ್ತಾರೆ. ಈ ಸಮಸ್ಯೆಗೆ ಈಗ ರಾಜಕೀಯ ಬಣ್ಣ ಬಳಿಯಾಲಾಗೀದೇ. ಈಗಾಗಲೇ ಹಲವು ಕಾರ್ಮಿಕರು ತಮ್ಮ ಸಂಸಾರದೊಂದಿಗೆ ಹೋಗಿದ್ದಾರೆ. ಇನ್ನು ಕೆಲವರು ಅನ್ಯ ಕೆಲಸದ ಮೊರೆ ಹೋಗಿದ್ದಾರೆ. ಒಂದೆರಡು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯದ ದಲ್ಲಿ ಉಡುಪಿ ಜಿಲ್ಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಮತ ಹಾಕದೇ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Related posts

Leave a Reply

Your email address will not be published. Required fields are marked *