Header Ads
Header Ads
Breaking News

ಕಾರ್ಕಳ ಮುಸ್ಲಿಮ್ ಒಕ್ಕೂಟದಿಂದ ದಿ. ಮಾಜಿ ಶಾಸಕ ಗೋಪಾಲ ಭಂಡಾರಿಯವರಿಗೆ ಶ್ರದ್ಧಾಂಜಲಿ ಸಭೆ

ಕಾರ್ಕಳ ಮುಸ್ಲಿಮ್ ಒಕ್ಕೂಟದ ಘಟಕದಿಂದ ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ ಯವರಿಗೆ ಶ್ರದ್ಧಾಂಜಲಿ ಸಭೆ ಒಕ್ಕೂಟದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿ ಘಟಕದ ಸದಸ್ಯರು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಿದರು. ನಂತರ ಜಮಾತುಲ್ ಫಲದ ಅಧ್ಯಕ್ಷರಾದ ಮೋಹಮ್ಮದ್ ಶರೀಫ್ ಮಾತನಾಡಿ ಒಬ್ಬ ನಿಷ್ಠಾವಂತ ಹಾಗೂ ಪ್ರಾಮಾಣಿಕ ನಾಯಕನನ್ನು ನಾವು ಕಳಕೊಂಡಿದ್ದೇವೆ. ಅವರ ಎರಡು ವರ್ಷದ ಶಾಸಕರಾಗಿದ್ದ ಅವಧಿಯಲ್ಲಿ ಕಾರ್ಕಳದಲ್ಲಿ ಹಲವು ಜನಪರ ಕೆಲಸವನ್ನು ಮಾಡಿದರು. ಅದಲ್ಲದೆ ಭಂಡಾರಿಯವರು ಪಕ್ಷಭೇದ ಮರೆತು, ಜಾತಿ ಮತವನ್ನು ಮರೆತು ಎಲ್ಲರ ಕೆಲಸವನ್ನು ಮಾಡುತ್ತಿದ್ದರು. ಅವರ ಅಗಲಿಕೆ ನಮಗೆಲ್ಲರಿಗೂ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಮಹಮ್ಮದ್ ಗೌಸ್ ಸೈಯದ ಹಸನ್, ಶೌಕತ್ ಹುಸೇನ್, ನಾಸಿರ್ ಬೈಲೂರು ಸಮದ್ ಖಾನ್ ಮೌಲನ ರಿಜ್ವಾನ್ ಅಹಮದ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *