Header Ads
Header Ads
Breaking News

ಕಾರ್ಕಳ: ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ 12 ದಿನಗಳ ಕಾಲ ನಡೆಯಲಿರುವ ಮಹಭಾರತ ದರ್ಶನ ಹರಿಕಥಾಯಜ್ಞ.

4 ನೇ ವರ್ಷದ 12 ದಿನಗಳ ಕಾಲ ಜರುಗುವ ಮಹಬಾರತ ದರ್ಶನ ಎಂಬ ಹರಿಕಥಾಯಜ್ಞವು ಕಾರ್ಕಳ ಶ್ರೀ ಅನಂತಪದ್ಮನಾಭ ದೇವಸ್ಥಾನ ಭಜಕವೃಂದ ಮತ್ತು ಮಂಗಳೂರು ಹರಿಕಥಾ ಪರಿಷತ್ತಿನ ಸಹಯೋಗದೊಂದಿಗೆ ಅನಂತಪದ್ಮನಾಭ ದೇವಸ್ಥಾನದ ವಠಾರದ ಸೀತಾರಾಮ ಫಾಟಕ್ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು. 

ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರುರವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತಾನಾಡಿದ ಅವರು ಒಂದು ಕಾಲದಲ್ಲಿ ದೇವಸ್ಥಾನದ ಅಂಗಳದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಿತ್ತಿದ್ದವು ಆದರೆ ಇಂದು ಅದಕ್ಕೆ ಸರಕಾರದಿಂದ ಅನುಮತಿ ಬೇಕಾಗಿದೆ. ಧರ್ಮಜಾಗ್ರತಿ ಮಾಡುವಂತ ಕೇಂದ್ರವೆ ದೇವಸ್ಥಾನಗಳಾಗಿವೆ. ನಮ್ಮಲ್ಲಿ ಇಂಗ್ಲೀಷ್ ಮಾಧ್ಯಮದ ವ್ಯಾಮೋಹ ಹೆಚ್ಚಾಗಿದೆ ಕರ್ನಾಟಕದಲ್ಲಿ ಭಾಷಾವಾರು ಪ್ರಾಂತ್ಯದ ಉದ್ದೇಶವೆ ಕನ್ನಡ ಉಳಿಬೇಕು ಎಂದು ಹೇಳಿದರು. ಈ ದೇವಸ್ಥಾನ ಬಹಳ ಪ್ರಾಚೀನವಾದ ದೇವಸ್ಥಾನ ಇಲ್ಲಿ ಇಂತ ದ್ವಾದಶ ಹರಿಕಥ ಯಜ್ಞದ ಮುಖಂತರ ಧರ್ಮ ಜಾಗೃತಿಯ ಕೆಲಸ ಆಗುತ್ತಿರುವ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.ನಂತರ ಮತಾನಾಡಿದ ಹರಿಕಥ ಪರಿಷತ್ತಿನ ಅಧ್ಯಕ್ಷ ಮಹಾಬಲ ಶೆಟ್ಟಿಯವರು ನಾವು ನಮ್ಮಲ್ಲಿರುವ ಪಶುತ್ವವನ್ನು ನಿರ್ಣಾಮ ಮಾಡಬೇಕು. ಯಾವಾಗ ಪಶುತ್ವ ನಿರ್ಣಾಮವಾಗುತ್ತದೆ ಅವಾಗ ನಮ್ಮಲ್ಲಿ ನಿಷ್ಟತೆ ಬೆಳೆಯುತ್ತದೆ ಎಂದರು.

ವೇದಿಕೆಯಲ್ಲಿ ದೇವನಂದ ಉಪಾಧ್ಯಯ, ವೇದಮೂರ್ತಿ ಶಂಕರನಾರಾಯಣ ಭಟ್ಟ್, ರತ್ನಾಕರ ರಾವ್, ಪಾಂಡುರಂಗ ಫಾಟಕ್ ಹಾಗೂ ಆನಂತ ಪದ್ಮನಾಭ ಭಟ್ ಉಪಸ್ಥಿತಿತರಿದ್ದರು.

Related posts

Leave a Reply