Header Ads
Header Ads
Header Ads
Breaking News

ಕಾರ್ಕಳ ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ ಬಡವರಿಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿ ಶಿವಮೊಗ್ಗ ಧರ್ಮಗುರು ಡಾ. ಫ್ರಾನ್ಸಿಸ್ ಅಭಿಪ್ರಾಯ

ಬಡವರು ಹಾಗೂ ನಿರಾಶ್ರಿತರಿಗೆ ಸಹಾಯ ಮಾಡುವುದು ಐಚ್ಛಿಕ ವಿಚಾರವಲ್ಲ ಬದಲಾಗಿ ನಮ್ಮ ಜವಾಬ್ದಾರಿ ಎಂದು ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಡಾ| ಫ್ರಾನ್ಸಿಸ್‌ರವರು ಹೇಳಿದರು.

ಅವರು ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವದ ಅಂಗವಾಗಿ ದಿವ್ಯ ಬಲಿಪೂಜೆ ನೇರವೇರಿಸಿ ಮಾತನಾಡಿದರು. ಬಡಬಗ್ಗರ ನಮ್ಮ ಸಹೋದರ ಸಹ್ರೆದರಿಯರು ಅವರನ್ನು ಆದರಿಸುವವನು ದೇವರಿಗೆ ಅಧಿಕವಾಗುವುದಿಲ್ಲ ತುಂಬಾಹತ್ತಿರವಾಗುವನು ಎಂದರು.

ಹಬ್ಬದ ಮೊದಲನೆ ದಿನವನ್ನು ಪುಟಾಣಿ ಮಕ್ಕಳಿಗಾಗಿ ಸಮರ್ಪಿಸುವ ಸಂಪ್ರದಾಯದಂತೆ ಮೊದಲನೆಯ ದಿನದ ಎರಡು ಬಲಿಪೂಜೆಯನ್ನು ಮಕ್ಕಳಿಗಾಗಿ ಅರ್ಪಿಸಲಾಯಿತು. ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾಜಿ ಶಾಸಕ ಗೋಪಾಲ ಭಂಡಾರಿ ಭೇಟಿ ನೀಡಿದರು. ನಿಟ್ಟೆ ಗ್ರಾಮ ಪಂಚಾಯತ್ ಮೂಲಕ ಅತ್ತೂರು ಜಾತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದರು.

ವರದಿ: ಕೆ.ಎಂ. ಖಲೀಲ್ ಕಾರ್ಕಳ

Related posts

Leave a Reply