Header Ads
Header Ads
Header Ads
Breaking News

ಕಾರ್ಕಳ ಸಾಮಾನ್ಯ ಮಾಸಿಕ ಸಭೆ ಪಡಿತರ ಅವ್ಯವಸ್ಥೆಯ ಬಗ್ಗೆ ಚರ್ಚೆ ಸಭೆಗೆ ಹಾಜರಾಗದ ದಂಡಾಧಿಕಾರಿ ವಿರುದ್ಧ ಅಸಮಾಧಾನ

ಕಾರ್ಕಳ ತಾಲೂಕಿನ ಸಾಮಾನ್ಯ ಮಾಸಿಕ ಸಭೆ ಸಂದೀಪ್ ಉನ್ನಿಕೃಷ್ಣನ್ ಸಭಾಂಗಣದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜಯಶೆಟ್ಟಿಯ ಅಧ್ಯಕ್ಷತೆಯಲ್ಲಿ ಜರುಗಿತು. ಪಡಿತರ ಚೀಟಿ ಗೊಂದಲದಿಂದ ಹೆಬ್ರಿಯಲ್ಲಿ ಅಕ್ಕಿ ಹಾಳಾಗಿರುವ ಬಗ್ಗೆ ಅಧ್ಯಕ್ಷರು ಅಧಿಕಾರಿಗಳ ಗಮನಕ್ಕೆ ತಂದರು. ನೀರೆಯಲ್ಲಿ ರಸ್ತೆ ಬದಿ ದೂರಸಂಪರ್ಕ ಇಲಾಖೆಯವರು ಚರಂಡಿ ಅಗೆದು ಹಾಕಿ ಕಳೆದ ೩ ದಿನಗಳಿಂದ ನಿರಂತರ ಅಪಘಾತವಾಗುತ್ತದೆ ಎಂದು ಸ್ಥಳೀಯರು ಸಂಭಂದ ಪಟ್ಟ ಅಧಿಕಾರಿಯ ಗಮನಕ್ಕೆ ತಂದರು.

ತಾಲೂಕು ದಂಡಾಧಿಕಾರಿಯವರು ಯಾವುದೇ ಸಾಮಾನ್ಯ ಸಭೆಯಲ್ಲಿ ಭಾಗವಹಿಸದೆ ಇದ್ದ ಕಾರಣ ಸದಸ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಬೆಂಬಲಿತ ಮಹಿಳಾ ತಾಲೂಕು ಪಂಚಾಯತ್ ಸದಸ್ಯೆ ಸೌಭಾಗ್ಯ ಮಡಿವಾಳರವರು ಎರಡು ತಿಂಗಳ ಮುಂಚೆ ವಾರಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಬಗ್ಗೆ ಸಿಡಿಮಿಡಿಗೊಂಡರು.

ವಾರ ಪತ್ರಿಕೆಯ ವರದಿಗಾರರನ್ನು ಅವಮಾನಿಸಿದ ಸಂದರ್ಭದಲ್ಲಿ ಅವಮಾನ ಸಭೆಯನ್ನು ಬಹಿಷ್ಕರಿಸಿದ ಎಲ್ಲಾ ಪತ್ರಕರ್ತರು ಹೊರಗೆ ಬಂದಾಗ ಅರ್ದ ಗಂಟೆವರೆಗೋ ಪತ್ರಕರ್ತರ ಮನವೊಲಿಕೆಗೆ ಯತ್ನಿಸಿದರು. ತಾಲೂಕು ಆಡಳಿತ ಸದಸ್ಯೆ ಹಾಗೂ ಅಧ್ಯಕ್ಷ ಮಾಲಿನಿ ಜೆ ಶೆಟ್ಟಿಯವರು ಮೂರು ಬಾರಿ ಪತ್ರಕರ್ತರಿಗೆ ಅವಮಾನ ಮಾಡಿದ್ದ ಹಿನ್ನೆಲೆಯಲ್ಲಿ ಸಭೆ ಬಹಿಷ್ಕರಿಸಿ ಹೊರನಡೆದರು.

Related posts

Leave a Reply