Header Ads
Header Ads
Breaking News

ಕಾರ್ಕಳ:65 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ಕಾರ್ಕಳ ಜಾಮಿಯ್ಯತ್ತುಲ್ ಫಲ ಕಾರ್ಕಳ ಘಟಕದಿಂದ 65 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಘಟಕದ ಅಧ್ಯಕ್ಷರಾದ ಮಹಮ್ಮದ್ ಶರೀಫ್‌ರವರ ನೇತ್ರತ್ವದಲ್ಲಿ ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಾತಾನಾಡಿದ ಅವರು ಜಾಮಿಯ್ಯತ್ತುಲ್ ಫಲಹಾ ಉಭಯ ಜಿಲ್ಲೆಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದರು.

ನಂತರ ಮಾತಾನಾಡಿದ ಕಾರ್ಕಳ ಮುಸ್ಲಿಂ ಜಾಮಾತಿನ ಅಧ್ಯಕ್ಷರಾದ ಆಶ್ಫಕ್ ಅಹಮ್ಮದ್ ಜಾಮಯ್ಯತ್ತುಲ್ ಫಲಹಾ ಕರ್ನಾಟಕ ರಾಜ್ಯದ ರಾಜೋತ್ಸವ ಪ್ರಶಸ್ತಿ ಪಡೆದ ಸಂಸ್ಥೆಯಾಗಿದೆ ನಮ್ಮ ಸಮಾಜದ ಬಡ ವಿದ್ಯಾರ್ಥಿ ಉನ್ನತ ಶಿಕ್ಷಣ ಪಡೆಯುದಕ್ಕೆ ಸಹಾಯ ಮಾಡುತ್ತದೆ. ಅದಲ್ಲದೆ ಅನಾರೋಗ್ಯ ಪೀಡಿತರಿಗೆ ಹಾಗೂ ಅರ್ಥಿಕವಾಗಿ ಹಿಂದುಳಿದವರಿಗೆ ಧನ ಸಹಾಯ ಮಾಡುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಸುಲೆಮಾನ್ ಸಾಹೇಬ್, ಗೌಸ್ ಮಿಯ್ಯಾರು, ಮಹಮ್ಮದ್ ರಷೀದ್, ನಾಸೀರ್ ಮುಂತಾದವರು ಉಪಸ್ಥಿತರಿದ್ದರು. 

Related posts

Leave a Reply