Header Ads
Header Ads
Breaking News

ಕಾರ್ತಿಕ್ ರಾಜ್ ಕೊಲೆ ಪ್ರಕರಣ, ಮೂವರು ಆರೋಪಿಗಳ ಬಂಧನ, ಕಾರ್ತಿಕ್ ರಾಜ್ ಸಹೋದರಿ ಕಾವ್ಯಳಿಂದ ಕೊಲೆಗೆ ಸುಪಾರಿ

ಪಜೀರು ಸುದರ್ಶನ ನಗರದ ನಿವಾಸಿ ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾರ್ತಿಕ್ ರಾಜ್‌ರ ಸಹೋದರಿ ಮತ್ತು ಆಕೆಯ ಪ್ರಿಯತಮ ಸಹಿತ ಮೂವರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಂಗಳೂರಿನ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್‌ರು, ಕಾರ್ತಿಕ್‌ರಾಜ್ ಸಹೋದರಿ ಕಾವ್ಯಾಶ್ರೀ, ಆಕೆಯ ಪ್ರಿಯತಮ ಪಂಡಿತ್ ಹೌಸ್ ಸಂತೋಷನಗರ ನಿವಾಸಿ ಗೌತಮ್ ಮತ್ತು ಗೌತಮ್‌ನ ಸಹೋದರ ಗೌರವ್ ಬಂಧಿತ ಆರೋಪಿಗಳು. ಈ ಪ್ರಕರಣ ಪೊಲೀಸ್ ಇಲಾಖೆಗೆ ಕಗ್ಗಂಟಾಗಿತ್ತು. ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಪತ್ತೆ ಹಚ್ಚಿದ್ದೇವೆ. ಎಸಿಪಿ ವೆಲೆಂಟೈನ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ ಎಂದ ಅವರು, ಸಹೋದರಿ ಕಾವ್ಯಾಳೇ ಸುಪಾರಿ ನೀಡಿದ್ದಳು ಎಂದು ಹೇಳಿದರು

Related posts

Leave a Reply