Breaking News

ಕಾರ್ತಿಕ್ ರಾಜ್ ಹತ್ಯೆ ಪ್ರಕರಣ : ಮೂವರ ಬಂಧನ

ಕೊಣಾಜೆ ಪಜೀರು ನಿವಾಸಿ ಉಮೇಶ್ ಗಾಣಿಗ ಎಂಬವರ ಪುತ್ರ ಕಾರ್ತಿಕ್ ರಾಜ್ (27) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ಪೊಲೀಸ್ ತಂಡ ಮೂವರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.
ಅ.23,2016 ರಂದು ಪಜೀರು ಮನೆಯಿಂದ ದೇರಳಕಟ್ಟೆಯ ಜಿಮ್ ಗೆಂದು ಅಸೈಗೋಳಿವರೆಗೆ ಜಾಗಿಂಗ್ ನಡೆಸುತ್ತಿದ್ದ ಸಂದರ್ಭ ನಸುಕಿನ 5 ಗಂಟೆ ವೇಳೆಗೆ ಅಪರಿಚಿತ ದುಷ್ಕರ್ಮಿಗಳು ತಲೆಗೆ ಸುತ್ತಿಗೆಯಿಂದ ಬಡಿದು ಹತ್ಯೆಗೆ ಯತ್ನಿಸಿದ್ದರು. ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಕಾರ್ತಿಕ್ ನನ್ನು ದಿನಪತ್ರಿಕೆ ವಿತರಿಸುವ ಕಾರಿನ ಚಾಲಕರೋರ್ವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಒಂದು ದಿನದ ಕಾಲ ಚಿಂತಾಜನಕ ಸ್ಥಿತಿಯಲ್ಲಿದ್ದ ಕಾರ್ತಿಕ್ ಅ.24 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿ ಆರೋಪಿಗಳ ಪತ್ತೆ 5 ತಿಂಗಳು ಕಳೆದರೂ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ, ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ಎರಡು ಬಾರಿ ಕೊಣಾಜೆ ಪೊಲೀಸ್ ಠಾಣೆ ಎದುರುಗಡೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆದಿತ್ತು. ಇದೇ ವೇಳೆ ಉದ್ಯಮಿಯೋರ್ವರು ಆರೋಪಿಗಳನ್ನು ಪತ್ತೆಹಚ್ಚಿದಲ್ಲಿ ಒಂದು ಲಕ್ಷ ನಗದು ಬಹುಮಾನ ಪೊಲೀಸರಿಗೆ ಘೋಷಿಸಿದ್ದರು. ಅದರ ಅವಧಿ ಮುಗಿದ ಬಳಿಕ ಇದೀಗ ಮಂಗಳೂರಿನ ವಿಶೇಷ ಪೊಲೀಸ್ ತಂಡ ಕಾರ್ತಿಕ್ ಮಹಿಳಾ ಸಂಬಂಧಿಯನ್ನೇ ಬಂಧಿಸಿರುವುದಾಗಿ ತಿಳಿದುಬಂದಿದ್ದು, ಈಕೆಯ ಜತೆಗೆ ಇಬ್ಬರು ಸಹೋದರರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ. ಆಕೆ ನೀಡಿದ 5 ಲಕ್ಷ ಸುಪಾರಿಗೆ ಹತ್ಯೆ ನಡೆದಿರುವುದಾಗಿ ಗೊತ್ತಾಗಿದೆ.

Related posts

Leave a Reply