Header Ads
Header Ads
Breaking News

ಕಾರ್ಮಿಕನ ಮೇಲೆ ಕುಸಿದ ಮಾರ್ಬಲ್: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಘಟನೆ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎಕ್ಸ್ಲೇಟರಿ ಬಳಿ ಮಾರ್ಬಲ್ ಅನ್ಲೋಡಿಂಗ್ ಮಾಡುತ್ತಿದ್ದ ವೇಳೆ ಕಾರ್ಮಿಕನ ಮೇಲೆ ಮಾರ್ಬಲ್ ಬಿದ್ದು ಕಾರ್ಮಿಕನ ಕಾಲಿಗೆ ಗಂಭೀರವಾದ ಗಾಯವಾಗಿದೆ. ತೀವ್ರ ರಕ್ತ ಸ್ರಾವದಿಂದ ಒದ್ದಾಡುತ್ತಿದ್ದ ಕಾರ್ಮಿಕನನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಬೇಕಿದ್ದ  ವಿಮಾನನಿಲ್ದಾಣದ ಅಂಬುಲೆನ್ಸ್ ಕಾರ್ಮಿಕನ ಸಹಾಯಕ್ಕೆ ಬರಲಿಲ್ಲ.

ಜನರೂ ಗುಂಪುಗೂಡಿದ್ದರು ಕೆಲವರು ಮೊಬೈಲಲ್ಲಿ ಫೋಟೋ ಕ್ಲಿಕ್ಕಿಸುತ್ತದ್ದರೇ ಹೊರತು ಕಾರ್ಮಿಕನ ರಕ್ಷಣೆಗೆ ಯಾರೂ ಬಂದಿರಲಿಲ್ಲ. ಮಂಗಳೂರಿನಿಂದ ವಿಮಾನ ಪ್ರಯಾಣಿಕರೊಬ್ಬರನ್ನು ಡ್ರಾಪ್ ಗೆ ಹೋಗಿದ್ದ ಕ್ಯಾಬ್ ಚಾಲಕ ಕೂಡಲೇ ಕಾರ್ಮಿಕನನ್ನು ತನ್ನ ಕಾರಲ್ಲಿ ಹಾಕಿ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.ಮಾನವೀಯತೆ ಮೆರೆದ ಆನ್ ಲೈನ್ ಕ್ಯಾಬ್ ಚಾಲಕ ಮಹೇಶರಿಗೆ ದ.ಕ ಜಿಲ್ವಾ ಆನ್ ಲೈನ್ ಡ್ರೈವರ್ಸ್ &ಓನರ್ಸ್ ಎಸೋಸಿಯೇಶನ್ ಅಭಿನಂದನೆ ಸಲ್ಲಿಸಿದೆ.

Related posts

Leave a Reply