Header Ads
Breaking News

ಕಾರ್ಮಿಕರನ್ನು ಕೈಬಿಟ್ಟ ಪಡುಬಿದ್ರಿಯ ಕಂಪನಿ:ಕಾರ್ಮಿಕರಿಗೆ ವ್ಯವಸ್ಥೆ ಕಲ್ಪಿಸಿದ ಪಡುಬಿದ್ರಿ ಪೊಲೀಸರು

ಕೆಲಸ ನಿರ್ವಾಹಿಸುತ್ತಿದ್ದ ಕಂಪನಿ ರಾತ್ರಿ ನಿಲ್ಲಲು ಅವಕಾಶವೇ ನೀಡದೆ ಕೈ ಬಿಟ್ಟ ವೇಳೆಯಲ್ಲಿ, ರಾತೋರಾತ್ರಿ ಖಾಸಗಿ ಹಾಲ್ ಒಂದರಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಿದ ಪಡುಬಿದ್ರಿ ಪೊಲೀಸರ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಶೆಗೆ ಪಾತ್ರವಾಗಿದೆ.


ನಂದಿಕೂರಿನ ಕೈಗಾರಿಕಾ ವಲಯದಲ್ಲಿ ಕಾರ್ಯಚರಿಸುತ್ತಿರುವ ಉದಯ ಶೆಟ್ಟಿ ಎಂಬವರ ಮಾಲಕತ್ವದ ಗೋಣಿ ಚೀಲ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಒಡಿಸ್ಸಾ ಮೂಲಕ 28 ಮಂದಿ ಯುವಕರು ಊರಿಗೆ ಹೋಗುವುದಕ್ಕಾಗಿ ಸಂಬಳ ಪಡೆದು, ತಾವಿದ್ದ ರೂಂಗಳನ್ನು ಬಿಟ್ಟು ಬಸ್ ಹಿಡಿಯುವುದಕ್ಕಾಗಿ ಉಡುಪಿಗೆ ಹೋಗಿದ್ದರು, ಅಲ್ಲಿ ಯಾವುದೇ ಬಸ್ಸಿನ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ಉಡುಪಿಯಲ್ಲೇ ತಂಗಿದ ಯುವಕರು ಶನಿವಾರ ಮರಳಿ ತಾವು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಗೆ ಬಂದಿದ್ದರಾದರೂ ಅವರನ್ನು ಸೇರಿಸಿಕೊಳ್ಳಲು ತಯಾರಿಲ್ಲದ ಕಂಪನಿ ಮಾಲಿಕ ಎರಡು ದಿನಗಳ ಬಳಿಕ ಬರುವಂತ್ತೆ ಹೇಳಿ ಬೀದಿಯಲ್ಲಿ ನಿಲ್ಲಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪಡುಬಿದ್ರಿ ಪಿಎಸ್ ಐ ಸುಬ್ಬಣ್ಣ ಈ ಬಗ್ಗೆ ಕಂಪನಿ ಮಾಲಿಕನನ್ನು ನಾನು ಬಹಳಷ್ಟು ವಿನಂತಿಸಿಕೊಂಡರೂ ಅವರನ್ನು ಸೇರಿಸಿಕೊಳ್ಳಲು ಒಪ್ಪಲಿಲ್ಲ. ಆ ಯುವಕರು ರಾತ್ರಿ ಹೊತ್ತು ಬೀದಿಯಲ್ಲಿ ಮಲಗುವ ಸ್ಥಿತಿ ಅರಿತ ನಾವು ಖಾಸಗಿ ಹಾಲ್ ಒಂದರ ಮಾಲಿಕರ ಮನವೊಲಿಸಿ ಎರಡು ದಿನಗಳ ಕಾಲ ಉಳಿದುಕೊಳ್ಳುವ ಅವಕಾಶ ಕಲ್ಪಿಸಿಕೊಡಲಾಗಿದ್ದು, ಎರಡು ದಿನಗಳ ಬಳಿಕ ಅವರನ್ನು ಅವರ ಊರಿಗೆ ಕಳುಹಿಸಿಕೊಡಲಾವುದು, ಆ ವರಗೆ ಅವರಿಗೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂಬುದಾಗಿ ಹೇಳಿದರು.

Related posts

Leave a Reply

Your email address will not be published. Required fields are marked *