Header Ads
Header Ads
Breaking News

ಕಾರ್ಮಿಕರ ಕಲ್ಯಾಣ ನಿಧಿಗೆ ಕನ್ನ ಹಾಕುತ್ತಿದೆ ಮೋದಿ ಸರಕಾರ : ಸಿಡಬ್ಲ್ಯೂಎಫ್‌ಐನ ಮಹಾಂತೇಶ್ ಕೆ ಆರೋಪ

ಮೂಡುಬಿದಿರೆ : ಬಸದಿ, ದೇವಸ್ಥಾನ ಹಾಗೂ ಇತರ ಕಟ್ಟಡಗಳನ್ನು ನಿರ್ಮಾಣ ಮಾಡಲು ಕಾರ್ಮಿಕರನ್ನು ಬಳಸುತ್ತಾರೆ ಆದರೆ ನಿರ್ಮಾಣದ ನಂತರ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. 500,100೦ ರೂ ನೋಟನ್ನು ಬ್ಯಾನ್ ಮಾಡುವ ಮೂಲಕ ಕಾರ್ಮಿಕರನ್ನು ಸಮಸ್ಯೆಗೆ ಸಿಲುಕಿಸಿರುವ ಮೋದಿ ಸರಕಾರವು ಇದೀಗ ಕಾರ್ಮಿಕರ ಕಲ್ಯಾಣ ನಿಧಿಗೆ ಕನ್ನ ಹಾಕಲು ಹೊರಟಿದ್ದು ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಸಿಡಬ್ಲ್ಯೂಎಫ್‌ಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಕೆ. ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.

ಅವರು ಸಮಾಜ ಮಂದಿರ ಸಭಾದಲ್ಲಿ ನಡೆದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಮಾವೇಶ ಮತ್ತು ಮಾಹಿತಿ ಶಿಬಿರದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇತರ ರಾಜ್ಯಗಳಿಂದ ಜಿಲ್ಲೆಗೆ ಬರುತ್ತಿರುವ ಕಟ್ಟಡ ಕಾರ್ಮಿಕರಿಗೆ ಸೂಕ್ತವಾದ ಭದ್ರತೆ ಹಾಗೂ ಮೂಲಭೂತ ಸೌಕರ್ಯಗಳ ವ್ಯವಸ್ಥೆಯಿಲ್ಲ. ಇದೀಗ ಕರಾವಳಿಯಲ್ಲಿ ಮರಳು ಸಿಗುತ್ತಿಲ್ಲ, ಕಬ್ಬಿಣ, ಸಿಮೆಂಟ್‌ನ ದರ ಜಾಸ್ತಿಯಾಗಿದೆ ಇದರಿಂದ ಮನೆ ನಿರ್ಮಾಣ ಕಡಿಮೆಯಾಗಿದೆ ಆದ್ದರಿಂದ ಕಟ್ಟಡ ಕಾರ್ಮಿಕರಿಗೆ ಕೆಲಸ ಇಲ್ಲದಂತ್ತಾಗಿದೆ. ಕಾರ್ಮಿಕರಿಗೆ ಪಿಂಚಣಿ, ಸ್ಕಾಲರ್‌ಶಿಪ್ ಹಾಗೂ ಸಾಲವನ್ನು 5ಲಕ್ಷಕ್ಕೆ ಏರಿಸಲಿ ಮತ್ತು ಸೌಲಭ್ಯಗಳನ್ನು ಹೆಚ್ಚಿಸಲಿ ಎಂದ ಅವರು ಜ.8 ಮತ್ತು 9ರಂದು ನಡೆಯುವ ಮುಷ್ಕರದಲ್ಲಿ ಕಾರ್ಮಿಕರು ಭಾಗವಹಿಸುವಂತೆ ಕರೆ ನೀಡಿದರು.

 ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಮೂಡುಬಿದಿರೆ ವಲಯದ ಅಧ್ಯಕ್ಷ ಜಯಾನಂದ ಪೂಜಾರಿ ಮಾರೂರು, ಕೋಶಾಧಿಕಾರಿ ಶ್ರೀಧರ ಆಚಾರಿ, ಉಪಾಧ್ಯಕ್ಷರುಗಳಾದ ಸೀತಾರಾಮ ಶೆಟ್ಟಿ, ದೂಜ ಪೂಜಾರಿ ವಾಲ್ಪಾಡಿ, ಸಂಜೀವ ಪೂಜಾರಿ ಮಾರೂರು, ಕೃಷ್ಣಪ್ಪ ಪೂಜಾರಿ ಹೊಸಬೆಟ್ಟು, ನಿತ್ಯಾನಂದ ಆಚಾರಿ ನಿಡ್ಡೋಡಿ, ಸಿಪಿಐಎಂನ ಮುಖಂಡರಾದ ರಾಧಾ, ಲಕ್ಷ್ಮೀ, ತಸ್ರಿಫ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply