Header Ads
Header Ads
Breaking News

ಕಾರ್ಮಿಕ ಸಂಘಟನೆಗಳು ಕರೆಕೊಟ್ಟ ಭಾರತ ಬಂದ್ ಹಿನ್ನೆಲೆ ವಿಟ್ಲ ಭಾಗದಲ್ಲಿ ಎಂದಿನಂತೆ ಕಾರ್ಯಚರಿಸಿದ ಅಂಗಡಿ ಮುಂಗಟ್ಟು

ವಿಟ್ಲ: ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ವಿಟ್ಲ ಭಾಗದಲ್ಲಿ ಹೆಚ್ಚಿನ ಪರಿಣಾಮ ಬೀರಿಲ್ಲ. ವಿಟ್ಲ ಪ್ರಮುಖ ಅಂಗಡಿಗಳು ಎಂದಿನಂತೆ ತೆರೆದಿತ್ತು. ಬೆಳಿಗ್ಗೆ ಖಾಸಗಿ ಹಾಗೂ ಸರ್ಕಾರಿ ಬಸ್ ಗಳು ಎಂದಿನಂತೆ ಸಂಚಾರ ಪ್ರಾರಂಭಿಸಿತ್ತು. ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಜನಸಂದಣೆ ಕಡಿಮೆ ಇತ್ತು. ಇದರಿಂದ ಮಂಗಳೂರು ಕಡೆ ತೆರಳುವ ಎಲ್ಲಾ ಖಾಸಗಿ ಬಸ್ ಗಳು ಸಂಚಾರ ಸ್ಥಗಿತಗೊಳಿಸಿದೆ. ಸ್ಥಳೀಯ ಖಾಸಗಿ ಬಸ್‌ಗಳು ಕನ್ಯಾನ, ಪೆರುವಾಯಿ, ಪೆರ್ಲ, ಸಾಲೆತ್ತೂರು ಕಡೆಗಳಿಗೆ ಸಂಚಾರ ಮಾಡಿದೆ. ಸರ್ಕಾರಿ ಬಸ್ ಗಳು ಮಂಗಳೂರು, ಪುತ್ತೂರು ಕಡೆಗೆ ಸಂಚಾರ ಪ್ರಾರಂಭಿಸಿದೆ. ವಿಟ್ಲ ಪೇಟೆಯಲ್ಲಿ ಪ್ರಮುಖ ಅಂಗಡಿಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದೆ. ಎಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹಾಗೂ ಯಾರೂ ಕೂಡ ಬಲತ್ಕಾರವಾಗಿ ಬಂದ್ ಮಾಡುವ ಹಾಗೂ ಕರೆ ನೀಡುವ ಘಟನೆಗಳು ನಡೆದಿಲ್ಲ. ಪೇಟೆಯಲ್ಲಿ ಜನಸಂಖ್ಯೆ ಕಡಿಮೆ ಇರುವುದರಿಂದ ಮಾತ್ರ ಬಸ್ ಗಳ ಓಡಾಟ ಸ್ಥಗಿತಗೊಂಡಿದೆ ಎನ್ನಲಾಗಿದೆ.

Related posts

Leave a Reply