Header Ads
Header Ads
Breaking News

ಕಾರ್ಮಿಕ ಸಂಘಟನೆಯಾಗಿ ಇಂಟಕ್ ಜಯಭೇರಿ : ಬಂದರಿನಲ್ಲಿ ವಿಜಯೋತ್ಸವ ಆಚರಣೆ

ನವಮಂಗಳೂರು ಬಂದರಿನಲ್ಲಿ ಬೃಹತ್ ಕಾರ್ಮಿಕ ಸಂಘಟನೆಯಾಗಿ ಇಂಟಕ್ ಹೊರಹೊಮ್ಮಿದ್ದು, ವಿಜಯೋತ್ಸವ ಆಚರಿಸಲಾಯಿತು.ಚೆಕಪ್ ಪದ್ದತಿಯಲ್ಲಿ ನಡೆಯುವ ಚುನಾವಣೆಯಲ್ಲಿ ಇಂಟಕ್ ಅತೀ ಹೆಚ್ಚು ಮತಗಳನ್ನು ಪಡೆದು ಅತೀ ದೊಡ್ಡ ಕಾರ್ಮಿಕ ಸಂಘಟನೆಯಾಗಿ ಮೂಡಿಬಂತು.

ಬಂದರು ಮುಖ್ಯ ದ್ವಾರದಿಂದ ಯು.ಶ್ರೀನಿವಾಸ್ ಮಲ್ಯ ಗೇಟ್‌ವರೆಗೆ ಇಂಟಕ್ ಕಾರ್ಯಕರ್ತರು ಮೆರವಣಿಗೆ ನಡೆಸಿ ಸಂಭ್ರಮವನ್ನಾಚರಿಸಿದರು.ಕಾರ್ಯಕ್ರಮದಲ್ಲಿ ಇಂಟಕ್ ಪರಮೋಚ್ಚ ನಾಯಕ ಎನ್.ಎಂ. ಅಡ್ಯಂತಾಯ ಮಾತನಾಡಿ ಕಾರ್ಮಿಕರು ಇಟ್ಟ ನಂಬಿಕೆಯನ್ನು ಉಳಿಸಿಕೊಂಡು ಭವಿಷ್ಯದಲ್ಲಿ ಕಾರ್ಮಿಕ ಒಳಿತಿಗೆ ಕೆಲಸ ಮುಂದುವರೆಸಿಕೊಂಡು ಹೋಗಿ ಕಾರ್ಮಿಕರು ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದರು.

ಆನಂತರ ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಅವರು ಮಾತನಾಡಿ ಇಂಟಕ್ ಕಾರ್ಮಿಕರ ಒಳಿತಿಗಾಗಿ ಹೋರಾಟ ನಡೆಸಿ ಅವರ ಕನಿಷ್ಟ ಮೂಲಸೌಕರ್ಯ, ಬೇಡಿಕೆಗಳನ್ನು ಪೂರೈಸುವಲ್ಲಿ ಹೆಚ್ಚಿನ ಯಶಸ್ಸು ಕಂಡಿದೆ. ಮುಂದಿನ ದಿನಗಳಲ್ಲಿಯೂ ಇಂಟಕ್ ತನ್ನ ಹೋರಾಟ ಮುಂದುವರೆಸಲಿದೆ ಎಂದರು.

ಎನ್.ಎಂ.ಪಿ.ಟಿ ಟ್ರಸ್ಟಿ ಅಬೂಬಕರ್, ದ.ಕ ಇಂಟಕ್ ಅಧ್ಯಕ್ಷ ಮನೋಹರ್ ಶೆಟ್ಟಿ ರಾಜ್ಯ ಮುಖಂಡರಾದ ರಹೀಂ, ಡಿ.ಆರ್ ನಾರಾಯಣ್, ಪಿ.ಕೆ ಸುರೇಶ್ ಕುಮಾರ್, ಹರೀಶ್ ಕುಮಾರ್, ಫಾರೂಕು, ಜಯ್ ಸುವರ್ಣ ಬೆಂಗ್ರೆ ಮತ್ತಿತರರು ಉಪಸ್ಥಿತರಿದ್ದರು

Related posts

Leave a Reply