Header Ads
Header Ads
Breaking News

ಕಾರ್ಯತೋಡಿ ಜಾತ್ರೋತ್ಸವ: ಸುಳ್ಯ ನಗರದಲ್ಲಿ ಹಸಿರುವಾಣಿ ಮೆರವಣಿಗೆ

ಸುಳ್ಯ: ಇಲ್ಲಿನ ಕಾರ್ಯತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವವು ಜ.28 ರಂದು ಜರಗಲಿದ್ದು ಇದರ ಅಂಗವಾಗಿ ಸುಳ್ಯ ನಗರದಲ್ಲಿ ಶನಿವಾರ ಹಸಿರುವಾಣಿ ಮೆರವಣಿಗೆ ನಡೆಯಿತು.
ದೇವಳದಲ್ಲಿ ಗಣಪತಿ ಹವನ ಉಗ್ರಾಣ ತುಂಬಿಸಿ, ನಂತರ ಹಸಿರುವಾಣಿ ಮೆರವಣಿಗೆ ಸುಳ್ಯ ಶ್ರೀರಾಮ ಭಜನಾ ಮಂದಿರದಿಂದ ಹೊರಟು ದೇವಳದ ವರೆಗೆ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗದೀಶ್ ಪಡ್ಪು, ವ್ಯವಸ್ಥಾಪನಾ ಸಮಿತಿ ಸದಸ್ಯರು, ನ್ಯಾಯವಾದಿ ಎಂ.ವೆಂಕಪ್ಪ ಗೌಡ, ಗಿರೀಶ್ ಡಿ.ಎಸ್, ನಾರಾಯಣ ಕೇಕಡ್ಕ, ಎ.ಟಿ.ಕುಸುಮಾಧರ, ನವೀನ್ ಕುದ್ಪಾಜೆ, ದಾಮೋದರ ಮಂಚಿ, ಜಯಕೃಷ್ಣ ಕಾಯರ್ತೋಡಿ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಭಕ್ರಾಧಿಗಳು ಉಪಸ್ಥಿತರಿದ್ದರು.

Related posts

Leave a Reply