Header Ads
Header Ads
Header Ads
Breaking News

ಕಾಲಮಿತಿಯಲ್ಲಿ ಶಿಸ್ತುಬದ್ದ ಕಂಬಳ ಕಂಬಳ. ಸಮಿತಿ ತುರ್ತು ಸಭೆಯಲ್ಲಿ ನಿರ್ಣಯ

ಮೂಡುಬಿದಿರೆ: ಕಂಬಳ ಉಳಿಯಬೇಕಾದರೆ ಎಲ್ಲೋ ಲೋಪವಾಗದ ರೀತಿಯಲ್ಲಿ ಅತ್ಯಂತ ಶಿಸ್ತುಬದ್ದವಾಗಿ ಕಂಬಳ ನಡೆಯಬೇಕು. 24 ಗಂಟೆಗಳ ಕಾಲಮಿತಿಯಲ್ಲಿ ಕಂಬಳ ಮುಗಿಸುವಲ್ಲಿ ಆಯೋಜಕರು, ಕಂಬಳದ ಯಜಮಾನರು ಕಟಿಬದ್ಧವಾಗಿರಬೇಕು. ತುಳುನಾಡಿನ ಸಾಂಪ್ರಾದಾಯಿಕ ಕಲೆ ಉಳಿಯಬೇಕಾದರೆ ಕಂಬಳ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಎಲ್ಲರ ಸಹಕಾರ ಅಗತ್ಯ. ಕಂಬಳ ಗೊಂದಲರಹಿತವಾಗಿ ನಡೆಯಲು ಸಮಿತಿಯು 17 ಪ್ರಮುಖ ಕೈಗೊಂಡಿದ್ದು, ಅದನ್ನು ಪಾಲಿಸುವಂತೆ ಜಿಲ್ಲಾ ಕಂಬಳ ಸಮಿತಿ ನಿರ್ಣಯ ತೆಗೆದುಕೊಂಡಿದೆ.

ಮೂಡುಬಿದಿರೆ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿ ಶನಿವಾರ ನಡೆಯಲಿರುವ ವಿಜಯೋತ್ಸವ ಕಂಬಳದ ಹಿನ್ನೆಲೆಯಲ್ಲಿ ಶುಕ್ರವಾರ ಸಾಯಂಕಾಲ ಕರೆಯಲಾದ ತುರ್ತುಸಭೆಯಲ್ಲಿ ನಿರ್ಣಯಗಳ ಅನುಷ್ಠಾನದ ಕುರಿತು ಚರ್ಚೆ ನಡೆದು, ಪ್ರಮುಖ ನಿರ್ಣಯಗಳನ್ನು ಸರ್ವಾನುಮತದ ಒಪ್ಪಿಗೆ ಪಡೆದುಕೊಳ್ಳಲಾಯಿತು.

ಮೂಡುಬಿದಿರೆ ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಕೆ.ಅಭಯಚಂದ್ರ ಜೈನ್, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಶಾಂತರಾಮ ಶೆಟ್ಟಿ ಬಾರ್ಕೂರು, ಗೌರವಾಧ್ಯಕ್ಷ ಭಾಸ್ಕರ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಕೋಶಾಧಿಕಾರಿ ಪಿ.ಆರ್ ಶೆಟ್ಟಿ, ಮಾರ್ಗದರ್ಶಕ ಸುಕುಮಾರ್ ಶೆಟ್ಟಿ, ಉಪಾಧ್ಯಕ್ಷ ಕೇಶವ ಭಂಡಾರಿ, ವಿದ್ಯಾಧರ ಜೈನ್, ಸುದೀಶ್ ಆರಿಗ, ಗೋಪಾಲಕೃಷ್ಣ ಭಟ್,ನವೀನ್ ಆಳ್ವ, ಶ್ರೀಕಾಂತ್ ಭಟ್, ನವೀನ್ ಅಂಬೂರಿ ಸಹಿತ ಕಂಬಳದ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುವವರು ಉಪಸ್ಥಿತರಿದ್ದರು.

ವರದಿ: ಪ್ರೇಮಶ್ರೀ ಮೂಡಬಿದರೆ

Related posts

Leave a Reply