Header Ads
Header Ads
Breaking News

ಕಾಲರಾಯ ಬಬ್ಬುಸ್ವಾಮಿಯ ಕುರಿತಾದ ವಿಡಿಯೋ ಆಲ್ಬಮ್ ಸಾಂಗ್ : ಕಾಪಿಕಾಡ್‌ನ ಶ್ರೀಗುರು ವೈದ್ಯನಾಥ ಶ್ರೀದೇವಿ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಬಿಡುಗಡೆ

ಕಾಲರಾಯ ಬಬ್ಬುಸ್ವಾಮಿಯ ಕುರಿತಾದ ವಿಡಿಯೋ ಆಲ್ಬಮ್ ಸಾಂಗೊಂದು ತುಳುನಾಡಿನಲ್ಲಿ ತಯಾರಾಗಿದೆ. ಶರವು ಕ್ರಿಯೇಷನ್ ಬ್ಯಾನರ್‌ನಡಿ ನಿರ್ಮಾಣಗೊಂಡ ಈ ಆಲ್ಬಮ್ ಸಾಂಗ್‌ನ ಬಿಡುಗಡೆ ಸಮಾರಂಭವು ನಗರದ ಬಿಜೈ ಕಾಪಿಕಾಡ್‌ನ ಶ್ರೀಗುರು ವೈದ್ಯನಾಥ ಶ್ರೀದೇವಿ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಜರುಗಿತು.

ಮಂಗಳೂರಿನ ಶರವು ಕ್ರಿಯೇಷನ್ ಬ್ಯಾನರ್‌ನಡಿ ಹಲವು ಆಲ್ಬಮ್ ಸಾಂಗ್‌ಗಳು ಮೂಡಿಬಂದಿದು, ಈಗಾಗಲೇ ಜನಮೆಚ್ಚಿಗೆಗಳಿಸಿದೆ. ಅಂತೆಯೇ ಮೂರನೇಯ ವೀಡಿಯೋ ಸಾಂಗ್ ಕಾಲರಾಯ ಬಬ್ಬುಸ್ವಾಮಿಯ ಕುರಿತು ತಯಾರಾಗಿದ್ದು, ಇದರ ಬಿಡುಗಡೆಗೆ ಸಮಾರಂಭವೂ ನಗರದ ಬಿಜೈ ಕಾಪಿಕಾಡ್‌ನ ಶ್ರೀಗುರು ವೈದ್ಯನಾಥ ಶ್ರೀದೇವಿ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ನಡೆಯಿತು.
ಮಂಗಳೂರು ಪಾಲಿಕೆಯ ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ ಅವರು, ಬಬ್ಬುಸ್ವಾಮಿಯ ಕುರಿತಾದ ನೂತನ ಆಲ್ಬಮ್ ಸಾಂಗ್ ಬಿಡುಗಡೆಗೊಳಿಸಿದ್ರು. ಈ ವೇಳೆ ಮಾತನಾಡಿದ ಅವರು, ತುಳುನಾಡಿನ ಸಂಸ್ಕೃತಿಯನ್ನ ಉಳಿಸುವ ನಿಟ್ಟಿನಲ್ಲಿ ಶರವು ಕ್ರಿಯೇಷನ್ ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಈ ತಂಡದಿಂದ ಜಿಲ್ಲೆಯ ಸಂಸ್ಕೃತಿಯನ್ನು ಉಳಿಸುವ ನಿರಂತರವಾಗಿ ಆಗಲಿ ಎಂದು ಶುಭಹಾರೈಸಿದ್ರು. 
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿ೪ ನ್ಯೂಸ್‌ನ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್ ಅವರು ಮಾತನಾಡಿ, ಈ ತಂಡದಿಂದ ಇನ್ನಷ್ಟು ಆಲ್ಬಮ್ ಸಾಂಗ್‌ಗಳು ಮೂಡಿ ಬರಲಿ ಎಂದು ಶುಭಹಾರೈಸಿದ್ರು.  ಆಲ್ಬಮ್ ಸಾಂಗ್‌ನ ನಿರ್ಮಾಪಕರಾದ ಶೈಲೇಶ್ ಸುದರ್ಶನ್ ಅವರು, ತಂಡದ ಮೂಲಕ ಮೂಡಿಬಂದ ಪ್ರಯತ್ನವನ್ನು ಶ್ಲಾಘಿಸಿದರು. 
ಈ ವೇಳೆ ಶ್ರೀಕ್ಷೇತ್ರದ ಆರ್ಚಕರಾದ ನಾರಾಯಣ, ಆಲ್ಬಮ್ ಸಾಂಗ್‌ನ ಟೀಮ್ ಲಿಡರ್ ಪ್ರವಿತ ಮೋಹನ್ ಮುಲ್ಲಕಾಡ್, ಗಾಯಕ ವಿನ್ಯಾಸ್ ಮಧ್ಯ, ಸಾಹಿತ್ಯ ಕೀರ್ತನ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಕ್ಷೇತ್ರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಬ್ಬಸ್ವಾಮಿ ದರ್ಶನ ಸೇವೆ ಹಾಗೂ ಬಲಿಪೂಜೆ ವಿಜೃಂಭಣೆಯಿಂದ ನಡೆಯಿತು.

Related posts

Leave a Reply

Your email address will not be published. Required fields are marked *