Header Ads
Header Ads
Breaking News

ಕಾಲು ಜಾರಿ ಕೆರೆಗೆ ಬಿದ್ದು ಮಹಿಳೆ ಮೃತ್ಯು : ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ವಿಟ್ಲ: ತೋಟದಲ್ಲಿ ಕೆಲಸ ಮಾಡುವ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಮಹಿಳೆ ಮೃತ ಪಟ್ಟ ಘಟನೆ ಕನ್ಯಾನ ಸಮೀಪದ ಅಂಗ್ರಿಯಲ್ಲಿ ನಡೆದಿದೆ. ಕನ್ಯಾನ ಅಂಗ್ರಿ ನಿವಾಸಿ ಅನಿತಾ ಡಿಸೋಜ (36) ಅವರು ಮೃತ ದುರ್ದೈವಿ. ಮನೆ ಪಕ್ಕದ ತೋಟಕ್ಕೆ ಕೆಲಸಕ್ಕೆ ಹೋಗುವ ಇವರು ಗುರುವಾರ ಬೆಳಗ್ಗೆ ಕೆಲಸಕ್ಕೆ ಹೋದ ಇವರು 11ಗಂಟೆ ಸಮಯಕ್ಕೆ ಕಾಫಿ ಕುಡಿಯಲು ಬಾರದ ಹಿನ್ನಲೆಯಲ್ಲಿ ತೋಟದ ಮಾಲಕರು ಹುಡುಕಲು ಹೋಗುವಾಗ ಕೆರೆಯಲ್ಲಿ ಚಪ್ಪಲ್ ಸೇರಿ ಇನ್ನಿತರ ಸಾಮಾಗ್ರಿ ತೇಲುತ್ತಿದ್ದುದನ್ನು ಗಮನಿಸಿ, ಸ್ಥಳೀಯರೊಂದಿಗೆ ಹುಡುಕಾಡಿದಾಗ ದೇಹ ಪತ್ತೆಯಾಗಿದೆ. ವಿಟ್ಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಕಾಲು ಜಾರಿ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ.

Related posts

Leave a Reply

Your email address will not be published. Required fields are marked *