Header Ads
Header Ads
Breaking News

ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಸಾವು : ವಿಟ್ಲ ಮುಡ್ನೂರು ಗ್ರಾಮದ ಆಲಂಗಾರುವಿನಲ್ಲಿ ಘಟನೆ

ವ್ಯಕ್ತಿಯೊಬ್ಬರು ಬಾವಿಯಲ್ಲಿದ್ದ ಪಂಪ್ ನೋಡುತ್ತಿದ್ದ ವೇಳೆ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ವಿಟ್ಲ ಮುಡ್ನೂರು ಗ್ರಾಮದ ಆಲಂಗಾರು ಎಂಬಲ್ಲಿ ನಡೆದಿದೆ. 

ಆಲಂಗಾರು ನಿವಾಸಿ ತುಕ್ರನಾಯ್ಕ ಮೃತಪಟ್ಟವರು. ಅವರು ತನ್ನ ಮನೆ ಮುಂಭಾಗದಲ್ಲಿದ್ದ ಬಾವಿಯಲ್ಲಿ ಇರಿಸಿದ್ದ ಪಂಪ್ ಕೆಟ್ಟು ಹೋಗಿದ್ದರಿಂದ ಅದನ್ನು ದುರಸ್ತಿ ಮಾಡಲೆಂದು ಬಾವಿಯನ್ನು ಇಣುಕಿ ನೋಡುತ್ತಿದ್ದಂತೆ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಬಾವಿ 25 ಅಡಿಗಳಷ್ಟು ಆಳವಿದ್ದು, ಇಪ್ಪತ್ತು ರಿಂಗ್‌ಗಳನ್ನು ಹಾಕಲಾಗಿತ್ತು. ಅವುಗಳ ಪೈಕಿ 10 ರಿಂಗ್ ನೀರು ಇದ್ದುದರಿಂದ ಕಾರ್ಯಚರಣೆಗೆ ತೊಂದರೆಯಾಗಿದೆ. ಸ್ಥಳೀಯರು ಮೃತದೇಹ ಹೊರತೆಗೆಯಲು ಪ್ರಯತ್ನಪಟ್ಟರೂ ಸಾಧ್ಯವಾಗಿರಲಿಲ್ಲ. ಬಳಿಕ ವಿಟ್ಲದ ಸಾಮಾಜಿಕ ಸಂಘಟನೆಯಾದ ಫ್ರೆಂಡ್ಸ್ ವಿಟ್ಲ ತಂಡಕ್ಕೆ ಮಾಹಿತಿ ನೀಡಲಾಗಿತ್ತು. ಅವರು ಸ್ಥಳಕ್ಕೆ ಬಂದು ಹರಸಾಹಸಪಟ್ಟು ಮೃತದೇಹ ಹೊರ ತೆಗೆಯುವುದರಲ್ಲಿ ಯಶಸ್ಸಿಯಾಗಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply