Header Ads
Header Ads
Breaking News

ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗೆ ಹಲ್ಲೆ ಮಂಗಳೂರಿನ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಘಟನೆ, ಒರ್ವ ವಿದ್ಯಾರ್ಥಿಯ ಮೇಲೆ ವಿದ್ಯಾರ್ಥಿಗಳ ಗುಂಪಿನಿಂದ ಅಟ್ಯಾಕ್

ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳ ತಂಡ, ಓರ್ವ ವಿದ್ಯಾರ್ಥಿಗೆ ಹಿಗ್ಗಾ ಮುಗ್ಗ ಥಳಿಸಿದ ಘಟನೆ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. ವಿದ್ಯಾರ್ಥಿಗಳ ನಡುವಿನ ವೈ ಮನಸ್ಸು ಕಾಲೇಜು ಬಿಡುವ ವೇಳೆ ಭುಗಿಲೆದಿದ್ದು ಓರ್ವನಿಗೆ ವಿದ್ಯಾರ್ಥಿಗಳು ಗುಂಪು ಹಲ್ಲೆ ನಡೆಸಿದೆ, ಕಾಲೇಜಿನ ಎದುರುಗಡೆಯ ನಡು ರಸ್ತೆಯಲ್ಲಿಯೇ ಈ ಘಟನೆ ನಡೆದಿದ್ದು ಓರ್ವ ವಿದ್ಯಾರ್ಥಿಯನ್ನು ಅಟ್ಟಾಡಿಸಿಕೊಂಡು ಹೋದ ವಿದ್ಯಾರ್ಥಿಗಳು ಸಿನಿಮೀಯ ರೀತಿಯಲಿ ರಸ್ತೆಯಲ್ಲಿ ಹಲ್ಲೆ ನಡೆಸಿದ್ದಾರೆ, ಈ ವೇಳೆ ವಾಹನ ಸಂಚಾರವಾಗುತ್ತಿದ್ದದನ್ನ ಲೆಕ್ಕಿಸದೆ ಹಲ್ಲೆಯನ್ನ ಮಾಡಿಕೊಂಡಿದ್ದಾರೆ.ಈ ಹಿಂದೆ ಇದೇ ಕಾಲೇಜಿನಲ್ಲಿ ಪ್ರಾಂಶುಪಾಲರಿಗೆ ವಿದ್ಯಾರ್ಥಿಯೋರ್ವ ಹಲ್ಲೆ ನಡೆಸಿ ಭಾರೀ ಸುದ್ದಿಯಾಗಿತ್ತು.

Related posts

Leave a Reply