Header Ads
Header Ads
Breaking News

ಕಾಲೇಜುಗಳಿಗೆ ಗಾಂಜಾ ಸಾಗಾಟ ಪ್ರಕರಣ: ಉಳ್ಳಾಲ ಪೊಲೀಸರಿಂದ ಮೂವರ ಬಂಧನ

ಉಳ್ಳಾಲ: ಕಾಲೇಜುಗಳಿಗೆ ಗಾಂಜಾ ಮಾರಾಟ ಮಾಡಲು ಸಾಗಾಟ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಪಾಂಡೇಶ್ವರದ ಸುಶಾನ್, ಶಿಕಾರಿಪುರ ಗುಳ್ಳೇದಹಳ್ಳಿಯ ರಮೇಶ್ ನಾಯ್ಕ್, ಕುಂಚೇನಹಳ್ಳಿಯ ಲೋಹಿತ್ ಕುಮಾರ್ ನಾಯ್ಕ್, ಎಂಬವರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ ಒಟ್ಟು 4 ಕೆ.ಜಿ ಗಾಂಜಾ ಮತ್ತು ಮೋಟಾರ್ ಸೈಕಲ್ ಮತ್ತು ನಗದು ಹಣ ಸೇರಿದಂತೆ ಒಟ್ಟು1,50,000ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಶಾಂತ್ ನಗರದ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದಾನೆ. ಈತನ ಮೂಲಕ ಕಾಲೇಜುಗಳಿಗೆ ತಂಡ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿತ್ತು ಅನ್ನುವುದಾಗಿ ತಿಳಿದುಬಂದಿದೆ.

Related posts

Leave a Reply