Header Ads
Breaking News

ಕಾಳಜಿ ರಿಲೀಫ್ ಫಂಡ್ ಸಿಎಂ ಪರಿಹಾರ ನಿಧಿಗೆ ಹಸ್ತಾಂತರಿಸಿ : ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿಕೆ

ಬೆಳ್ತಂಗಡಿ: ಕಾಳಜಿ ರಿಲೀಫ್ ಫಂಡ್‍ನ ಹೆಸರಿನಲ್ಲಿ ಬ್ಯಾಂಕಿನಲ್ಲಿಟ್ಟಿರುವ ರೂ.2.59 ಕೋಟಿ ಹಣ ಕಳೆದ ಒಂದು ವರ್ಷದಿಂದ ಬ್ಯಾಂಕಿನಲ್ಲಿದ್ದು, ಕಾನೂನು ಪ್ರಕಾರ ಇದಕ್ಕೆ ಶೇ 33 ಫಸೆರ್ಂಟ್ ಇನ್‍ಕಮ್ ಟ್ಯಾಕ್ಸ್ ಅಂದರೆ ಸುಮಾರು ರೂ.82 ಲಕ್ಷ ಸಮಿತಿ ಕಟ್ಟಬೇಕಾಗಿದೆ. ಇಲ್ಲವಾದರೆ ಇದನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಹಸ್ತಾಂತರಿಸಬೇಕು. ಕಾಳಜಿ ರಿಲೀಪ್ ಫಂಡ್ ಸಮಿತಿಯ ನಿರ್ಲಕ್ಷದಿಂದಾಗಿ ಈ ಹಣ ತಾಲೂಕಿನ ಜನರಿಗೆ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಲೆಕ್ಕ ಕೊಟ್ಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಧನಂಜಯ ರಾವ್ ಅವರಿಗೆ ತಿಳಿದಿಲ್ಲವೇ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಪ್ರಶ್ನಿಸಿದರು.ಅವರು ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಬ್ಯಾಂಕಿನಲ್ಲಿ ಇಟ್ಟ ಹಣದ ಕುರಿತಂತೆ ಅಡಿಟ್ ಆಗಿಲ್ಲ. ಇದರ ಬಗ್ಗೆ ಸಿಂಡಿಕೇಟ್ ಬ್ಯಾಂಕಿನ ಮೆನೇಜರ್‍ರಲ್ಲಿ ಕೇಳಿದಾಗ ಸರಿಯಾದ ಮಾಹಿತಿ ನೀಡುತ್ತಿಲ್ಲ. ಎರಡು ದಿನದ ನಂತರ ಕೊಡುತ್ತೇವೆ ಎಂದು ಹೇಳುತ್ತಾರೆ. ಈ ರೀತಿ ಹೆದರುವ ಅಗತ್ಯವೇನು? ಇದರಲ್ಲಿ ಏನೂ ನಿಗೂಢತೆ ಅಡಗಿದೆ ಎಂದು ಬಂಗೇರ ಹೇಳಿದರು.ಈ ಸಂದರ್ಭ ಕೆಪಿಸಿಸಿ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಕುರ್ತೋಡಿ, ರಂಜನ್ ಜಿ. ಗೌಡ, ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *