Header Ads
Header Ads
Breaking News

ಕಾಳಾವರ ಮನೆ ತೆರವಿಗೆ ಆದೇಶ ಹಿನ್ನೆಲೆ: ಕಾಳಾವರ ದೇವಸ್ಥಾನಬೆಟ್ಟು ಪ್ರದೇಶಕ್ಕೆ ಭೇಟಿ ನೀಡಿದ ಜೆಡಿಎಸ್ ನಿಯೋಗ

ಕುಂದಾಪುರದ ಕಾಳಾವರ ಗ್ರಾಮಪಂಚಾಯಿತಿ ವ್ಯಾಪ್ತಿಯ ದೇವಸ್ಥಾನಬೆಟ್ಟು ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳ ಮನೆ ತೆರವಿಗೆ ತಹಸೀಲ್ದಾರ್ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ದೇವಸ್ಥಾನಬೆಟ್ಟುವಿಗೆ ಜೆಡಿಎಸ್ ಮುಂಖಂಡರು ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು.ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ರವಿ ಶೆಟ್ಟಿ, ರಾತ್ರೋರಾತ್ರಿ ಮನೆ ನಿರ್ಮಿಸಿದ್ದಾರೆಂದು ಅಧಿಕಾರಿಗಳು ಮನೆ ತೆರವಿಗೆ ಆದೇಶ ನೀಡಿದ್ದಾರೆ.

ಆದರೆ ಒಂದು ವರ್ಷಗಳ ಹಿಂದೆ ಈ ಮನೆಯನ್ನು ನಿರ್ಮಿಸಲಾಗಿದೆ. ಮನೆ ನೋಡಿದರೆ ಯಾವಾಗ ಕಟ್ಟಿದ್ದು ಎನ್ನುವುದು ತಿಳಿಯುತ್ತೆ. ಏಳೂ ಕುಟುಂಬಗಳು ಬಂಟ ಸಮುದಾಯಕ್ಕೆ ಸೇರಿದವರಾಗಿದ್ದು, ಎಲ್ಲರೂ ಕಡು ಬಡವರು. ಬೇರೆ ಬೇರೆ ಕಡೆ ಹೊಟೇಲ್, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಯಾವುದೋ ಕಾಣದ ಕೈಗಳ ಒತ್ತಡಕ್ಕೆ ಮಣಿದು ಮನೆ ತೆರವು ಆದೇಶ ನೀಡಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಉಸ್ತುವಾರಿ ಸಚಿವರೊಂದಿಗೆ ಫೋನ್ ಮೂಲಕ ಸಂಪರ್ಕಿಸಿ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದ್ದೇನೆ. ಕೂಡಲೇ ಅವರು ನಾನು ಬಂದು ಸ್ಥಳ ಪರಿಶೀಲನೆ ಮಾಡುತ್ತೇನೆ ಎಂದರು.

ಕುಂದಾಪುರ ಜೆಡಿಎಸ್ ಮುಖಂಡ ಪ್ರಕಾಶ ಶೆಟ್ಟಿ ತೆಕ್ಕಟ್ಟೆ ಮಾತನಾಡಿ, ದೇವಸ್ಥಾನಬೆಟ್ಟು ನಿವಾಸಿಗಳ ಸಮಸ್ಯೆಗಳ ಕುರಿತು ಮುರ್‍ನಾಲ್ಕು ದಿನಗಳಿಂದ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದೆ. ಹೀಗಾಗಿ ಈ ಸ್ಥಳಕ್ಕೆ ಭೇಟಿ ನೀಡಿದ್ದು, ಇಲ್ಲಿನ ಕುಟುಂಬಗಳ ಜೊತೆ ಚರ್ಚಿಸಿದ್ದೇವೆ. ಇಲ್ಲಿನ ಪರಿಸ್ಥಿತಿಯನ್ನು ಸರಿಯಾಗಿ ತಿಳಿದುಕೊಂಡು ಜನರ ಸಂಕಷ್ಟಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಎಲ್ಲರೂ ಇಲ್ಲಿನ ನಿವಾಸಿಗಳ ಪರ ನಿಂತಿದ್ದಾರೆ. ಸರಿಯಾಗಿ ಅರ್ಥಮಾಡಿಕೊಂಡು ಈ ಕುಟುಂಬಗಳಿಗೆ ನ್ಯಾಯ ಒದಗಿಸಲು ತಾಲೂಕು ಆಡಳಿತ ಮುಂದಾಗಬೇಕು ಎಂದರು.

Related posts

Leave a Reply