Header Ads
Header Ads
Breaking News

ಕಾವಳಕಟ್ಟೆಯ ಬೆಂಗತ್ತೋಡಿಯಲ್ಲಿ ಐದನೇ ಮೂಲತ್ವ ವಿಶ್ವಪ್ರಶಸ್ತಿ ಪ್ರದಾನ ಸಮಾರಂಭ

ಬಂಟ್ವಾಳ: ಮೂಲತ್ವ ಫೌಂಡೇಷನ್ ಚಾರಿಟೇಬಲ್ ಟ್ರಸ್ಟ್‌ನ ಐದನೇ ಮೂಲತ್ವ ವಿಶ್ವಪ್ರಶಸ್ತಿ ಪ್ರಧಾನ ಸಮಾರಂಭ ಕಾವಳಕಟ್ಟೆಯ ಬೆಂಗತ್ತೋಡಿಯಲ್ಲಿ ನಡೆಯಿತು. ಮ್ಯಾಗಸ್ಸೆಸೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾರಾಷ್ಟ್ರದ ಲೋಕ ಬಿರಾದರ್ ಪ್ರಕಲ್ಪದ ಡಾ. ಪ್ರಕಾಶ್ ಆಮ್ಟೆ, ಮತ್ತು ಡಾ. ಮಂದಾಕಿನಿ ಆಮ್ಟೆ ದಂಪತಿಗಳಿಗೆ ನೀಡಿ ಗೌರವಿಸಲಾಯಿತು. ಪ್ರಕಾಶ್ ಆಮ್ಟೆ, ಮತ್ತು ಡಾ. ಮಂದಾಕಿನಿ ಆಮ್ಟೆ ದಂಪತಿಗಳು ದೀಪಪ್ರಜ್ವಲಿಸಿದರು.ನಿಟ್ಟೆ ವಿವಿಯ ಕುಲಪತಿ ಎನ್. ವಿನಯ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಡಾ. ಪ್ರಕಾಶ್ ಆಮಟೆಯವರದ್ದು ವಿಮರ್ಶೆಗೆ ನಿಲುಕದ ವ್ಯಕ್ತಿತ್ವ ಎಂದು ಬಣ್ಣಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿನ ಮೂರು ನಾಲ್ಕು ಪ್ರಾದೇಶಿಕ ಭಾಷೆಗಳು ಗೊತ್ತಿದ್ದರೆ ಉತ್ತಮ, ಇಲ್ಲವಾದರೆ ಇಲ್ಲಿ ನಡೆದಾಡುವುದು ಕಷ್ಟ ಎಂದು ಹೇಳಿದರು.ಬಳಿಕ ಮಾತನಾಡಿದ ಪ್ರಕಾಶ್ ಆಮ್ಟೆ ಉತ್ತಮವಾದ ಶಿಕ್ಷಣದಿಂದ ದೇಶದ ಅಭಿವೃದ್ದಿ ಸಾಧ್ಯವಾಗುತ್ತದೆ, ನಾಗರೀಕತೆಯ ಅರಿವಿರದ ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಮೂಭೂತ ಸೌಲಭ್ಯಗಳ ಜೊತೆ ಉತ್ತಮ ಶಿಕ್ಷಣ ದೊರಕುವಂತಾಗಬೇಕು ಎಂದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕರಾಮ ಪೂಜಾರಿ, ಬೆಂಗಳೂರಿನ ಬಿ.ವಿ.ಕಾರಂತ್ ರಂಗ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಎಮ್. ಜಯರಾಮ್ ಪಾಟೀಲ್, ನಿವೃತ್ತ ಸೇನಾನಿ ಅಣ್ಣಪ್ಪ ಎಚ್., ವಗ್ಗದ ವೈದ್ಯೆ ಡಾ.ರಿಯೋನಾ ಸೆರಾ, ಪ್ರಗತಿರ ಕೃಷಿಕ ಅಮೈ ಮಹಾಲಿಂಗ ನಾಯ್ಕ್, ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಸದಸ್ಯ ಚಂದ್ರಶೇಖರ ಕರ್ಣ, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಪ್ರಕಾಶ್ ಮೂಲತ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *