Header Ads
Breaking News

ಕಾವೂರು ಗ್ರಾಮ ಲೆಕ್ಕಾಧಿಕಾರಿ ಕಚೇರಿ ಬಳಿ ಕಾದಿದೆ ಭಾರೀ ಅಪಾಯ..!

ಮಂಗಳೂರು ಮಹಾನಗರ ಹೇಳಿಕೊಳ್ಳೋಕೆ ಸ್ಮಾರ್ಟ್ ಸಿಟಿ ಆಗೋಕೆ ಹೊರಟಿರುವ ನಗರ. ಆದರೆ ನಗರದೊಳಗೆ ಇರುವ ಸಮಸ್ಯೆಗಳು ಸ್ಮಾರ್ಟ್‌ಸಿಟಿಗೆ ವ್ಯಂಗ್ಯ ಮಾಡೋ ಹಾಗೆ ರಾರಾಜಿಸುತ್ತಿವೆ. ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ ಎಂದರೆ ಮಂಗಳೂರಿನ ಕಾವೂರು ಗ್ರಾಮ ಲೆಕ್ಕಾಧಿಕಾರಿ ಕಚೇರಿ ಬಳಿ ಇರೋ ಬೃಹತ್ ನೀರಿನ ಟ್ಯಾಂಕ್. ಈ ಡೇಂಜರಸ್ ಟ್ಯಾಂಕ್ ಬಗ್ಗೆ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.

ಒಂದು ಕಡೆಯಿಂದ ಮಂಗಳೂರು ಅಭಿವೃದ್ಧಿ ಹೊಂದುತ್ತಿದೆ. ಸ್ಮಾರ್ಟ್ ಸಿಟಿ ಆಗುವತ್ತ ಮಂಗಳೂರು ನಗರ ದಾಪುಗಾಲಿಡ್ತಾ ಇದೆ. ಆದರೆ ಹೊಸ ಕಾಮಗಾರಿಯ ಭರದಲ್ಲಿ ಹಳೆಯ, ಶಿಥಿಲಗೊಂಡ ಕಾಮಗಾರಿಗಳಿಗೆ ಇನ್ನೂ ಕೂಡ ಮುಕ್ತಿ ದೊರಕಿಲ್ಲ. ಅನೇಕ ಕಡೆಗಳಲ್ಲಿ ಅನೇಕ ವಿಚಾರಗಳು ಮೈತುಂಬಾ ಅಪಾಯವನ್ನು ತುಂಬಿಕೊಂಡು ನಿಂತಿವೆ. ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ ಎಂದರೆ ಕಾವೂರಿನ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಬಳಿಯಲ್ಲಿ ಇರುವ ನೀರಿನ ಟ್ಯಾಂಕ್..

ಅದೆಷ್ಟೋ ವರ್ಷಗಳ ಹಿಂದೆ ನಿರ್ಮಾಣಗೊಂಡಿರೋ ಈ ನೀರಿನ ಟ್ಯಾಂಕ್ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಸಿಮೆಂಟ್ ಎಲ್ಲ ಎದ್ದುಹೋಗಿ ಒಳಭಾಗದ ಕಬ್ಬಿಣದ ಸರಳುಗಳು ಕಾಣಿಸುತ್ತಿವೆ. ಇದರ ತಳಪಾಯ ಎಷ್ಟರಮಟ್ಟಿಗೆ ಶಿಥಿಲಗೊಂಡಿದೆ ಎಂದರೆ ಕಾವೂರು ರಸ್ತೆಯಲ್ಲಿ ಯಾವುದೇ ಘನ ವಾಹನಗಳು ಓಡಾಡಿದರೂ ಸಾಕು, ಅದರ ಓಡಾಟಕ್ಕೆ ತಕ್ಕಂತೆ ಈ ಟ್ಯಾಂಕ್ ಕೂಡ ಅಲ್ಲಾಡುತ್ತದೆ. ಇದರ ತಳಭಾಗದಲ್ಲೇ ಗ್ರಾಮಲೆಕ್ಕಾಧಿಕಾರಿಗಳ ಕಚೇರಿಯಿದೆ. ಸ್ವಲ್ಪ ಎಡವಟ್ಟಾದ್ರೂ ಟ್ಯಾಂಕ್ ಉರುಳಿ ಈ ಹೆಂಚಿನ ಛಾವಣಿಯ ಈ ಕಟ್ಟಡದ ಮೇಲೆ ಉರುಳೋದು ಗ್ಯಾರಂಟಿ.

ಈ ಟ್ಯಾಂಕ್ ಪರಿಸರದ ಸುತ್ತಮುತ್ತ ಸರಕಾರಿ ಶಾಲೆ, ರಿಕ್ಷಾ ಸ್ಟ್ಯಾಂಡ್ ಇದೆ. ದಿನನಿತ್ಯ ನೂರಾರು ಮಂದಿ ಈ ಪರಿಸರದಲ್ಲಿ ನಡೆದಾಡುತ್ತಾರೆ. ಸಾರ್ವಜನಿಕರು ನಡೆದುಕೊಂಡು ಹೋಗುವ ಹಾದಿಯಲ್ಲಿ ಯಮರೂಪಿ ಟ್ಯಾಂಕ್ ಇದ್ದು ಇದರ ಬಗ್ಗೆ ಹಲವು ಬಾರಿ ಸಂಭಂಧ ಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದರು ಯಾವುದೆ ಪ್ರತಿಕ್ರಿಯು ಇಲ್ಲವಾಗಿದೆ.

ಈ ಭಾಗದಲ್ಲಿ ಇರೋದು ಈ ಟ್ಯಾಂಕ್‌ನ ಸಮಸ್ಯೆ ಒಂದೇ ಅಲ್ಲ. ಇಲ್ಲಿ ಬರೋ ಜನರು ಬಸ್‌ಗೆ ವೆಯ್ಟ್ ಮಾಡ್ಬೇಕು ಅಂದ್ರೆ ಒಂದು ಸರಿಯಾದ ಬಸ್ ತಂಗುದಾಣ ಕೂಡ ಇಲ್ಲ. ಗ್ರಾಮ ಪಂಚಾಯಿತ್ ಕಟ್ಟಡ ಕೂಡ ಹಳೆಯದಾಗಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣದ ಅನಿವಾಂiiತೆಯಿದೆ. ಈ ಎಲ್ಲಾ ಸಮಸ್ಯೆಗೆ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಒಂದು ಪರಿಹಾರವನ್ನು ಒದಗಿಸಬೇಕಿದೆ. ಇಲ್ಲದಿದ್ದಲ್ಲಿ ಭಾರೀ ಅನಾಹುತ ಆಗೋದು ಖಚಿತವಾಗಿದೆ.

Related posts

Leave a Reply

Your email address will not be published. Required fields are marked *