Header Ads
Header Ads
Breaking News

ಕಾವೂರು ಪದವಿನ ಒಳ ಚರಂಡಿ ಸಮಸ್ಯೆ ಇನ್ನೂ ಜೀವಂತ, ಮಂಗಳೂರು ಪಾಲಿಕೆಯಲ್ಲಿ ಪ್ರಧಾನಿ ಪತ್ರಕ್ಕೂ ಬೆಲೆಯಿಲ್ಲ


ಒಳ ಚರಂಡಿ ಸಮಸ್ಯೆಯಿಂದ ಬಳಲುತ್ತಿದ್ದ ಆ ಭಾಗದ ಜನರು ಸರ್ಕಾರಿ ಕಚೇರಿಗಳಿಗೆ ಹಲವು ಬಾರಿ ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯರು ಪ್ರಧಾನಮಂತ್ರಿಗೆ ಮೊರೆಹೋಗಿದ್ದಾರೆ. ಅದ್ರೆ ಆ ಪ್ರಧಾನಿ ಕಾರ್ಯಾಯಾಲದಿಂದ ಪ್ರತ ಬಂದು ಎರಡು ತಿಂಗಳು ಕಳೆದರೂ ಪಾಲಿಕೆ ಇನ್ನೂ ಆ ಭಾಗದ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ.
ಕಾವೂರು ವ್ಯಾಪ್ತಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲ, ಹೀಗಾಗಿ ಒಳಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಸುತ್ತಲಿನ ಜನರು ಮೂಗು ಮುಚ್ಚಿಕೊಂಡು ಜೀವನ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ . ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ, ಹಲವು ವರ್ಷಗಳ ಹಿಂದಿನದ್ದು, ಅದ್ರೂ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ, ಈ ಭಾಗಕ್ಕೆ ಒಳ ಚರಂಡಿ ಸಂಪರ್ಕ ಕಲ್ಪಿಸುವಂತೆ ಪಾಲಿಕೆಗೆ ಹಲವು ಬಾರಿ ಮನವಿ ನೀಡಿ ಬೇಸತ್ತಿದ್ದ ಸ್ಥಳೀಯ ಮಹಿಳೆ ಫೆಲ್ಸಿ ರೇಗೋ ಅವ್ರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಮೇ ೨೫ರಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಸಮಸ್ಯೆ ಕುರಿತು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಇದಾಗಿ ೨ ತಿಂಗಳು ಕಳೆದರೂ ಅಲ್ಲಿಗೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ
ಕಾವೂರು ನಗರ ಪ್ರದೇಶದ ರಸ್ತೆಗಳು ಅಭಿವೃದ್ಧಿಯಾಗಿದೆ. ಅಂದಿನ ಮೇಯರ್ ಹರಿನಾಥ್ ಬೋಂದೇಲ್ ಅವ್ರು ಅಭಿವೃದ್ಧಿ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ನೀಡಿದ್ರು. ಈ ಹಿನ್ನೆಲೆಯಲ್ಲಿ ಕಾವೂರು ನಗರ ಪ್ರದೇಶದ ರಸ್ತೆಗಳು ಅಭಿವೃದ್ಧಿಯಾಗಿದೆ. ಅದ್ರೆ ಕಾವೂರು ಪದವು ಭಾಗದಲ್ಲಿ ಸೂಕ್ತ ಒಳ ಚರಂಡಿ ವ್ಯವಸ್ಥೆಯನ್ನು ಕಲ್ಲಿಸಲಾಗಿಲ್ಲ. ಹಾಗಾಗಿ ಪ್ರಧಾನಿಗೆ ಪತ್ರ ಬರೆದವು. ಈ ಪತ್ರದ ಬಗ್ಗೆ ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ ಎನ್ನುವ ಬಗ್ಗೆ ಪಾಲಿಕೆಗೆ ಹಲವು ಬಾರಿಗೆ ಅಲೆದಾಡಿದ್ದೇನೆ, ಅದರೆ ಈ ಬಗ್ಗೆ ಅಧಿಕಾರಿಗಳಿಗೆ ವಿಷಯವೇ ತಿಳಿದಿಲ್ಲ. ಪ್ರಧಾನಿ ಅವರ ಪತ್ರಕ್ಕೆ ಬೆಲೆ ಇಲ್ಲದ ಮೇಲೆ ನಮ್ಮ ಸಮಸ್ಯೆಗೆ ಪಾಲಿಕೆಯಲ್ಲಿ ಬೆಲೆ ಸಿಕ್ಕಿತೇ ಅಂತಾರೆ ಫೆಲ್ಸಿ ರೇಗೋ .
ನಗರ ಪ್ರದೇಶದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕಾದ ಪಾಲಿಕೆ ಮಾತ್ರ ಇತ್ತ ಗಮನ ಹರಿಸದೇ ಇರುವುದು ದುರಂತ.

Related posts

Leave a Reply