Header Ads
Header Ads
Breaking News

ಕಾವೂರು ಶಿವರಾತ್ರಿ ಜಾಗರಣೆಗೆ ಪೊಲೀಸರಿಂದ ಅಡ್ಡಿ ವಿಚಾರ, ಪೊಲೀಸರು ಕಾನೂನಿನ ಚೌಕಟ್ಟು ಮೀರಿ ವರ್ತಿಸಿದ್ದಾರೆ : ಹರಿನಾಥ್, ಶಶಿಧರ್ ಹೆಗ್ಡೆ ಆರೋಪ

ಕಾವೂರಿನಲ್ಲಿ ನಡೆದ ಶಿವರಾತ್ರಿ ಜಾಗರಣೆಗೆ ಕಾವೂರು ಠಾಣಾ ಪೊಲೀಸರು ಅಡ್ಡಿಪಡಿಸಿದ ಕ್ರಮಕ್ಕೆ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ಮಾಜಿ ಮೇಯರ್ ಹರಿನಾಥ್ ಎಂ. ಅವರು, ಶಿವರಾತ್ರಿ ಎನ್ನುವುದು ಹಿಂದೂಗಳ ಒಂದು ಪ್ರಮುಖ ಹಬ್ಬ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಸಂಪ್ರದಾಯ. ಧಾರ್ಮಿಕ ಕಾರ್ಯಕ್ರಮಕ್ಕೆ ಪೊಲೀಸರು ಅಡ್ಡಿಪಡಿಸಿದ್ದು ಸರಿಯಲ್ಲ. ಮುಂದಕ್ಕೆ ಇಂತಹ ಘಟನೆ ಆಗಬಾರದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಪಾಲಿಕೆಯ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ ಅವರು, ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ಕಾನೂನು ಚೌಕಟ್ಟಿನೊಳಗೆ ನಡೆಯುವಂತೆ ನೋಡಿಕೊಳ್ಳಬೇಕಾದವರು ಪೊಲೀಸರು. ಆದರೆ ಕಾವೂರು ದೇವಳದ ವಿಚಾರದಲ್ಲಿ ಪೊಲೀಸರು ಬೇಜವಾಬ್ದಾರಿ ವರ್ತನೆ ತೋರಿದ್ದಾರೆ. ಪೊಲೀಸರೇ ಕಾನೂನು ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಈ ವಿಚಾರದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

Related posts

Leave a Reply

Your email address will not be published. Required fields are marked *