Header Ads
Header Ads
Breaking News

ಕಾವ್ಯದಲ್ಲಿ ಮಾನವ ಅಂತಕರಣ ಇರಬೇಕು:ಸಾಹಿತಿ ಸುಮುಖಾನಂದ ಜಲವಳ್ಳಿ ಅಭಿಪ್ರಾಯ.

 

ಶಿಕ್ಷಕ ಮಹಾದೇವ್ ಮೂಡುಕೊಣಾಜೆ ಅವರ ’ಒಪ್ಪಿರುವೆ’ ಭಾವಗೀತೆ ಸಿಡಿ ಮತ್ತು ’ಎನ್ನ ಕೊಂದವರೆ’ ಕವನಸಂಕಲನ ಬಿಡುಗಡೆ ಕಾರ್ಯಕ್ರಮವು ಮೂಡುಬಿದರೆಯ ಸ್ವರ್ಣ ಮಂದಿರದಲ್ಲಿ ನಡೆಯಿತು. ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಅವರು ಕವನ ಸಂಕಲನ ಬಿಡುಗಡೆಗೊಳಿಸಿದರು.

ಮೂಡುಬಿದರೆಯ ಸ್ವರ್ಣ ಮಂದಿರದಲ್ಲಿ ಕವನಸಂಕಲನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಮಾತನಾಡಿದ ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಅವರು, ಕಾವ್ಯದಲ್ಲಿ ಮಾನವ ಅಂತಕರಣ ಇರಬೇಕು. ನವ್ಯ ಕಾವ್ಯಗಳು ನಾಡ ಲಯಗಳಿಂದ ದೂರವಾಗುತ್ತಿದ್ದು ಜನ ಮತ್ತು ಕಾವ್ಯದ ಮಧ್ಯೆ ಕಂದಕ ಸೃಷ್ಟಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಹಾದೇವ ಅವರ ಕಾವ್ಯದಲ್ಲಿ ಮಗು ಮತ್ತು ಪ್ರಕೃತಿಯನ್ನು ಕಾಣುವ ಪ್ರಕ್ರಿಯೆ ನಡೆದಿದ್ದು ಕಾವ್ಯ ಓದುಗರಿಗೆ ಹತ್ತಿರವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ ‘ಜೀವನದಲ್ಲಿ ನಿರಾಶೆ, ನಿರುತ್ಸಾಹವನ್ನು ಮೆಟ್ಟಿ ನಿಲ್ಲುವ ಗಟ್ಟಿ ಮನಸ್ಸು ನಮ್ಮದಾಗಬೇಕು. ಸಮಾಜದಲ್ಲಿರುವ ಒಳ್ಳೆಯ ವಿಚಾರಗಳು ಇಂತಹ ಸಿಡಿ, ಕವನಸಂಕಲನಗಳ ಮೂಲಕ ಜನರಿಗೆ ತಲುಪಬೇಕು’ ಎಂದರು. ಅಧ್ಯಕ್ಷತೆ ವಹಿಸಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೈ.ಶಿವರಾಮಯ್ಯ ಸಿಡಿ ಬಿಡುಗಡೆಗೊಳಿಸಿದರು.ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ, ಕನ್ನಡ ಭಾಷಾ ಪರಿವೀಕ್ಷಕ ಶಮಂತ್ ವಿ.ಎಂ., ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಅಳಿಯೂರು ಪ್ರೌಢಶಾಲಾ ಮುಖ್ಯೋಪಧ್ಯಾಯಿನಿ ರೋಸಾ ವಿ.ಜೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಬಿ. ಮತ್ತು ಶ್ವೇತಾ ಮಹಾದೇವ್, ಸಂಗೀತ ನಿರ್ದೇಶಕ ಪ್ರಮೋದ್ ಸಪ್ರೆ, ಗುರುರಾಜ್ ಎಂ.ಬಿ ಉಪಸ್ಥಿತರಿದ್ದರು.

Related posts

Leave a Reply