Header Ads
Header Ads
Breaking News

ಕಾವ್ಯ ಅಸಹಜ ಸಾವಿನ ಪ್ರಕರಣ ನ್ಯಾಯಯುತ ತನಿಖೆಗೆ ಒತ್ತಾಯ ಮುಲ್ಕಿ ಬಿಲ್ಲವ ಸಂಘದಿಂದ ಪ್ರತಿಭಟನೆ

ಅಳ್ವಾಸ್ ನ ವಿದ್ಯಾರ್ಥಿ ಕಟೀಲು ದೇವರಗುಡ್ಡೆ ನಿವಾಸಿ ಕಾವ್ಯ ನ್ಯಾಯಯುತ ತನಿಖೆಗೆ ಒತ್ತಾಯಿಸಿ ಮುಲ್ಕಿ ಬಿಲ್ಲವ ಸಂಘದ ವತಿಯಿಂದ ಬಿಲ್ಲವ ಸಂಘದ ಮುಂಭಾಗ ಪ್ರತಿಭಟನೆ ನಡೆಯಿತು, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಡಿದ ಮುಲ್ಕಿ ಬಿಲ್ಲವ ಸಂಡದ ಅಧ್ಯಕ್ಷ ಗೋಪಿನಾಥ ಪಡಂಗ ಕಾವ್ಯ ನಿಗೂಡ ಸಾವಿನ ಹಿಂದೆ ಅನೇಕ ಸಂಶಯವಿದೆ, ಆ ಸಂಶಯದ ಸುಳಿಯ ಬಗ್ಗೆ ಪ್ರತಿಭಟನೆ ನಡೆಯುತ್ತಿದ್ದೇವೆ, ಕಾವ್ಯ ತಂದೆ ತಾಯಿ ಮಗಳನ್ನು ಕಳೆದುಕೊಂಡ ದುಖ: ದಲ್ಲಿದ್ದಾರೆ, ಸಾವುಗೀಡದ ಹಿಂದಿನ ದಿನ ನಗುತ್ತಾ ಮಾತನಡಿದ ಕಾವ್ಯ ಅತ್ಮಹತ್ಯೆ ಮಾಡಿಕೊಳ್ಳಲು ಸಾದ್ಯವಿಲ್ಲ ಎಂಬುದು ಹೆತ್ತವರ ಅಳಲು, ಅತ್ಮಹತ್ಯೆ ಹಿಂದೆ ಯಾರದೇ ಕೈವಾಡವಿರಲಿ ಅವರಿಗೆ ಶಿಕ್ಷೆ ಆಗಬೇಕು ಎಂದರು. ಈ ಸಂದರ್ಭ ಹಳೆಯಂಗಡಿ ಬಿಲ್ಲ ಸಂಘದ ಗೌರಾವಾಕ್ಷ ಗಣೇಶ್ ಬಂಗೇರ, ಚೇಳಾರು ಬಿಲ್ಲವ ಸಂಘದ ಅಧ್ಯಕ್ಷ ಶ್ರೀನಿವಾಸ್ ಅಮೀನ್, ಮಟ್ಟು ಬಿಲ್ಲವ ಸಂಘದ ಅಧ್ಯಕ್ಷ ಉದಯ ಅಮೀನ್ ಮಟ್ಟು, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ದಿನ್ ರಾಜ್ ಬಂಗೇರ, ಉಮೇಶ್ ಮಾನಂಪಾಡಿ ಮತ್ತಿತರರು ಇದ್ದರು.
ವರದಿ: ನಿಶಾಂತ್ ಮುಲ್ಕಿ

Related posts

Leave a Reply